Select Your Language

Notifications

webdunia
webdunia
webdunia
webdunia

ಹಕ್ಕಿ ಜ್ವರ ಇಫೆಕ್ಟ್: ಚಿಕನ್ ಅಂದ್ರೆ ಬೇಡಪ್ಪಾ ಎನ್ನುತ್ತಿರುವ ಜನ, ಮಟನ್ ಗೆ ಭಾರೀ ಡಿಮ್ಯಾಂಡ್

chicken

Krishnaveni K

ಬೆಂಗಳೂರು , ಸೋಮವಾರ, 3 ಮಾರ್ಚ್ 2025 (09:57 IST)
ಬೆಂಗಳೂರು: ರಾಜ್ಯದಲ್ಲಿ ಈಗ ಹಕ್ಕಿ ಜ್ವರ ಭೀತಿ ಕಾಣಿಸಿಕೊಂಡಿದ್ದು, ಜನ ಕೋಳಿ ಮಾಂಸ ಖರೀದಿಸಲು ಹಿಂದೇಟು ಹಾಕುತ್ತಿದ್ದಾರೆ. ಈ ನಡುವೆ ಮಟನ್ ಗೆ ಭಾರೀ ಡಿಮ್ಯಾಂಡ್ ಬಂದಿದೆ.

ರಾಯಚೂರು, ಬಳ್ಳಾರಿ, ಚಿಕ್ಕಬಳ್ಳಾಪುರ ಸೇರಿದಂತೆ ಗಡಿ ಜಿಲ್ಲೆಗಳಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡಿದೆ. ಸಾವಿರಾರು ಕೋಳಿಗಳ ಮಾರಣಹೋಮ ನಡೆಸಲಾಗಿದೆ. ಅಲ್ಲದೆ ಚಿಕನ್ ಉತ್ಪನ್ನಗಳಿಗೂ ನಿರ್ಬಂಧ ವಿಧಿಸಲಾಗಿದೆ.

ಈ ನಡುವೆ ಜನರೇ ಸ್ವಯಂ ಪ್ರೇರಿತರಾಗಿ ಚಿಕನ್ ಖರೀದಿಗೆ ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ಈಗ ಚಿಕನ್ ಗೆ ಬೇಡಿಕೆ ಕುಸಿದಿದೆ. ಆದರೆ ಮಾಂಸಪ್ರಿಯರು ಮಟನ್ ಖರೀದಿಗೆ ಹೆಚ್ಚು ಆಸಕ್ತಿ ವಹಿಸುತ್ತಿದ್ದಾರೆ. ಈ ಕಾರಣಕ್ಕೆ ಮಟನ್ ಬೆಲೆಯಲ್ಲಿ ಏರಿಕೆಯಾಗಿದೆ.

ಚಿಕನ್ ಗೆ ಪ್ರತೀ ಕೆ.ಜಿ.ಗೆ 20 ರಿಂದ 40 ರೂ.ಗಳಷ್ಟು ಇಳಿಕೆಯಾಗಿದ್ದರೆ ಮಟನ್ ಗೆ 50 ರೂ.ಗಳಷ್ಟು ಏರಿಕೆಯಾಗಿದೆ. ದರ ಏರಿಕೆಯಾಗಿದ್ದರೂ ಮಾಂಸ ತಿನ್ನದೇ ಇರಲಾರೆ ಎನ್ನುವವರು ದುಬಾರಿ ಬೆಲೆ ಕೊಟ್ಟಾದರೂ ಖರೀದಿ ಮಾಡುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

Karnataka Assembly: ಈ ಬಾರಿ ಬಜೆಟ್ ವೇಳೆ ಸಿಎಂ ಸಿದ್ದರಾಮಯ್ಯ ನಿಂತು ಓದಲ್ಲ