ಮೈಸೂರು: ಉದಯಗಿರಿ ಪೊಲೀಸ್ ಠಾಣೆ ಮೇಲೆ ದಾಳಿಗೆ ಪ್ರಚೋದನೆ ನೀಡಿದ್ದ ಆರೋಪದಲ್ಲಿ ಕೊನೆಗೂ ಮೌಲ್ವಿ ಮುಫ್ತಿ ಮುಸ್ತಾಕ್ ನನ್ನು ಪೊಲೀಸರು ಬಂಧಿಸಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಧರ್ಮದ ಬಗ್ಗೆ ಅವಹೇಳನಕಾರಿಯಾಗಿ ಪೋಸ್ಟ್ ಮಾಡಿದ್ದರೆಂಬ ಕಾರಣಕ್ಕೆ ಮೈಸೂರು ಉದಯಗಿರಿ ಪೊಲೀಸ್ ಠಾಣೆ ಮೇಲೆ ಉದ್ರಿಕ್ತ ಮುಸ್ಲಿಂ ಯುವಕರ ಗುಂಪು ಕಲ್ಲು ತೂರಾಟ ನಯಗಿಡೆಸಿ ದಾಂಧಲೆ ನಡೆಸಿತ್ತು.
ಈ ಘಟನೆಗೆ ಮೌಲ್ವಿ ಮುಫ್ತಿಯ ಪ್ರಚೋದನಕಾರಿ ಭಾಷಣವೇ ಕಾರಣ ಎನ್ನಲಾಗಿತ್ತು. ಮೌಲ್ವಿಯ ಪ್ರಚೋದನಕಾರೀ ಭಾಷಣ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಹಾಗಿದ್ದರೂ ಇದುವರೆಗೆ ಆತನನ್ನು ಬಂಧಿಸಿರಲಿಲ್ಲ. ನಿನ್ನೆಯಷ್ಟೇ ಮೈಸೂರು ಮಾಜಿ ಸಂಸದ ಪ್ರತಾಪ್ ಸಿಂಹ, ಯಾಕೆ ಸಿದ್ದರಾಮಯ್ಯನವರೇ ಮುಲ್ಲಾನನ್ನು ಬಂಧಿಸುವ ತಾಕತ್ತಿಲ್ವಾ ಎಂದು ಪ್ರಶ್ನೆ ಮಾಡಿದ್ದರು.
ಇಂದು ಕೊನೆಗೂ ಪ್ರಚೋದನಕಾರೀ ಭಾಷಣ ಮಾಡಿದ್ದ ಮೌಲ್ವಿಯನ್ನು ಬಂಧಿಸಲಾಗಿದೆ. ಠಾಣೆ ಮೇಲೆ ದಾಳಿ ನಡೆಸಿದ ಎಷ್ಟೋ ಜನರಿಗೆ ನಿಜವಾದ ಕಾರಣವೇ ಗೊತ್ತಿರಲಿಲ್ಲ. ಆದರೆ ಈತನ ಪ್ರಚೋದನಕಾರೀ ಭಾಷಣಕ್ಕೆ ಮರುಳಾಗಿ ದಾಳಿಗೆ ಮುಂದಾಗಿದ್ದರು ಎನ್ನಲಾಗಿದೆ. ಈ ಕಾರಣಕ್ಕೆ ಈತನ ಬಂಧನಕ್ಕೆ ವಿಪಕ್ಷಗಳಿಂದ ಒತ್ತಡಗಳಿತ್ತು. ಇದೀಗ ಸಿಸಿಬಿ ಪೊಲೀಸರು ಆತನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.