Select Your Language

Notifications

webdunia
webdunia
webdunia
webdunia

ಮೈಸೂರು ಗಲಭೆಕೋರರು ಅಮಾಯಕರು, ಕೆಲವೇ ಮಂದಿ ಎಂದವರಿಗೆ ಠಕ್ಕರ್ ನೀಡಿದಂತಿದೆ ಈ ವರದಿ

Mysore Violence

Krishnaveni K

ಮೈಸೂರು , ಶನಿವಾರ, 15 ಫೆಬ್ರವರಿ 2025 (11:12 IST)
ಮೈಸೂರು: ಇತ್ತೀಚೆಗೆ ಮೈಸೂರಿನಲ್ಲಿ ನಡೆದ ಪೊಲೀಸ್ ಠಾಣೆ ಮೇಲಿನ ದಾಳಿಗೆ ಸಂಬಂಧಿಸಿದಂತೆ ಕೆಲವು ರಾಜಕೀಯ ನಾಯಕರು ಅಮಾಯಕರು, ಕೆಲವೇ ಮಂದಿ ದಾಳಿ ನಡೆಸಿದ್ದು ಎಂದೆಲ್ಲಾ ತಿಪ್ಪೇ ಸಾರುವ ಪ್ರಯತ್ನ ನಡೆಸಿದ್ದರು. ಆದರೆ ಈ ವರದಿ ಅದನ್ನು ಸುಳ್ಳು ಮಾಡುತ್ತಿದೆ.

ಮೈಸೂರು ಉದಯಗಿರಿ ಪೊಲೀಸ್ ಠಾಣೆ ಮುಂದೆ ಮೊನ್ನೆ ಕೆಲವೇ ಮಂದಿ ಅಲ್ಲ ಸಾವಿರ ಸಂಖ್ಯೆಯಲ್ಲಿ ಯುವಕರ ಗುಂಪು ಗಲಾಟೆ ಎಬ್ಬಿಸಲು ಸೇರಿತ್ತು ಎಂಬುದಕ್ಕೆ ಸಾಕ್ಷ್ಯವೆಂಬಂತೆ ಕೆಲವು ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

ಎಫ್ಐಆರ್ ನಲ್ಲೂ ಗಲಾಟೆಯ ತೀವ್ರತೆ ಉಲ್ಲೇಖಿಸಲಾಗಿದೆ. ಅಂದು ಸ್ವಲ್ಪವೇ ಮೈಮರೆತಿದ್ದರೂ ಪೊಲೀಸರ ಹೆಣ ಬೀಳುತ್ತಿತ್ತು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿತ್ತು. ಇದೇ ಕಾರಣಕ್ಕೇ ಘಟನೆಗೆ ಸಂಬಂಧಿಸಿದಂತೆ ನೂರಾರು ಮಂದಿ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.

ಒಂದು ವಿಡಿಯೋದಿಂದ ಪ್ರಚೋದಿತರಾಗಿ ಅಲ್ಲಿ ಸೇರಿದ್ದವರಿಗೆ ನಿಜವಾಗಿ ಸೋಷಿಯಲ್ ಮೀಡಿಯಾ ಪೋಸ್ಟ್ ನಲ್ಲಿ ಏನಿತ್ತು ಎಂಬುದೇ ಸರಿಯಾಗಿ ಮಾಹಿತಿಯಿತ್ತೋ ಇಲ್ವೋ ಗೊತ್ತಿಲ್ಲ. ಆದರೆ ಅಂದು ಗಲಾಟೆ ನಡೆಯುವಾಗ ಸಾಕಷ್ಟು ಸಂಖ್ಯೆಯಲ್ಲಿ ಜನರಿದ್ದ ವಿಡಿಯೋಗಳು ಖಾಸಗಿ ವಾಹಿನಿಗಳಲ್ಲಿ ಪ್ರಸಾರವಾಗಿವೆ.

Share this Story:

Follow Webdunia kannada

ಮುಂದಿನ ಸುದ್ದಿ

ಅಯೋಧ್ಯೆ ಪ್ರಧಾನ ಅರ್ಚಕ ಸತ್ಯೇಂದ್ರ ದಾಸ್ ರನ್ನು ಸರಯೂ ನದಿಗೆ ಅರ್ಪಿಸುತ್ತಿರುವ ವಿಡಿಯೋ