ಮೈಸೂರು: ಉದಯಗಿರಿ ಪೊಲೀಸ್ ಠಾಣೆ ಮೇಲೆ ಕಿಡಿಗೇಡಿಗಳು ಹಲ್ಲೆ ನಡೆಸಲು ಮುಷ್ತಾಕ್ ಮುಕ್ಬೋಲಿ ಎಂಬಾತನ ಪ್ರಚೋದನಕಾರೀ ಭಾಷಣ ಕಾರಣವಾಯ್ತಾ ಎನ್ನುವ ಸಂಶಯ ಮೂಡಿದೆ. ಆತನ ಭಾಷಣದ ವಿಡಿಯೋ ಈಗ ವೈರಲ್ ಆಗಿದೆ.
ಉದಯಗಿರಿಯಲ್ಲಿ ನಿನ್ನೆ ಸುರೇಶ್ ಎಂಬಾತನ ಸೋಷಿಯಲ್ ಮೀಡಿಯಾ ಪೋಸ್ಟ್ ಮುಸ್ಲಿಮ್ ಯುವಕರನ್ನು ಕೆರಳಿಸಿತ್ತು. ಸುರೇಶ್ ನನ್ನು ಪೊಲೀಸರು ಬಂಧಿಸಿಟ್ಟಿದ್ದ ಉದಯಗಿರಿ ಪೊಲೀಸ್ ಠಾಣೇಗೆ ಏಕಾಏಕಿ ಮುಸ್ಲಿಮ್ ಯುವಕರ ಗುಂಪು ನುಗ್ಗಿ ದಾಂಧಲೆ ನಡೆಸಿತ್ತು. ಸ್ಥಳದಲ್ಲಿ ಈಗಲೂ ಉದ್ವಿಗ್ನ ಪರಿಸ್ಥಿತಿ ಮುಂದುವರಿದಿದೆ.
ಘಟನೆಗೆ ನಿಖರ ಕಾರಣವೇನೆಂದು ಪೊಲೀಸರು ಈಗ ತನಿಖೆ ನಡೆಸುತ್ತಿದ್ದಾರೆ. ಇದರ ನಡುವೆ ಸೋಷಿಯಲ್ ಮೀಡಿಯಾದಲ್ಲಿ ಮುಷ್ತಾಕ್ ಎಂಬಾತ ನೀಡುತ್ತಿರುವ ಪ್ರಚೋದನಕಾರೀ ಭಾಷಣದ ವಿಡಿಯೋ ವೈರಲ್ ಆಗಿದೆ. ಇದನ್ನು ಮಾಜಿ ಸಂಸದ ಪ್ರತಾಪ್ ಸಿಂಹ ಕೂಡಾ ಹಂಚಿಕೊಂಡಿದ್ದಾರೆ.
ಸುರೇಶ್ ಎಂಬ ನಾಯಿ ನಮ್ಮ ಮಾಲಿಕನ ಮೇಲೆ ಕೆಟ್ಟದಾಗಿ ಪೋಸ್ಟ್ ಮಾಡಿದ್ದಾನೆ. ಧರ್ಮ ರಕ್ಷಣೆಗಾಗಿ ನಾವು ಪ್ರಾಣ ಕೊಡಲೂ ಸಿದ್ಧರಾಗಿರಬೇಕು. ಆತನಿಗೆ ಮರಣದಂಡನೆಯಾಗಬೇಕು, ಮೈಸೂರಿನ ಮುಸ್ಲಿಮರೆಲ್ಲರೂ ಒಂದಾಗಿ. ಇದಕ್ಕೆ ತಕ್ಕ ಉತ್ತರ ಕೊಡಬೇಕು ಎಂದು ಆತ ವಿಡಿಯೋದಲ್ಲಿ ಪ್ರಚೋದಿಸಿದ್ದ. ಈ ವಿಡಿಯೋದಿಂದ ಪ್ರಚೋದನೆಗೊಂಡೇ ಯುವಕರ ಗುಂಪು ದಾಳಿ ನಡೆಸಿರಬಹುದೇ ಎಂಬ ಸಂಶಯ ಮೂಡಿದೆ.