ಹೈದರಾಬಾದ್: ಟಾಲಿವುಡ್‌ನ ರೆಬೆಲ್ ಸ್ಟಾರ್ ಪ್ರಭಾಸ್ ಶೀಘ್ರದಲ್ಲೇ ಹಸೆಮಣೆಯೇರುತ್ತಾರೆ ಎಂದು ಸಂಭ್ರಮಿಸಿದ ಅವರ ಅಭಿಮಾನಿಗಳಿಗೆ ಕಹಿಸುದ್ದಿ. ಕೆಲ ದಿನಗಳಿಂದ ಬಿರುಗಾಳಿಯಂತೆ ಹಬ್ಬಿದ್ದ ಮದುವೆ ವದಂತಿಯನ್ನು ನಟನ ಆಪ್ತ ಮೂಲಗಳು ತಳ್ಳಿ ಹಾಕಿವೆ.
ಟಾಲಿವುಡ್‌ನ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ಆಗಿರುವ ಪ್ರಭಾಸ್ ಅವರಿಗೆ 45 ವರ್ಷವಾದರೂ ಮದುವೆಯಾಗಿಲ್ಲ. ಹಲವು ವರ್ಷಗಳಿಂದ ಸಾಕಷ್ಟು ನಟಿಯರೊಂದಿಗೆ ಹೆಸರು ತಳುಕು ಹಾಕಿಕೊಂಡಿತ್ತು. ಬಾಹುಬಲಿ ಸಿನಿಮಾ ಸಂದರ್ಭದಲ್ಲಿ ನಟಿ ಅನುಷ್ಕಾ ಶೆಟ್ಟಿ ಜೊತೆ ಜೋರಾಗಿ ಕೇಳಿಬಂದಿತ್ತು. ಇದನ್ನು ಕೇಳಿ ಸಂಭ್ರಮಿಸಿದ್ದ ಅಭಿಮಾನಿಗಳು ನಂತರ ನಿರಾಸೆಗೆ ಒಳಗಾಗಿದ್ದರು.
ಕೆಲ ದಿನಗಳಿಂದ ಪ್ರಭಾಸ್ ಅವರ ಮದುವೆ ಮ್ಯಾಟರ್ ಮತ್ತೆ ಮುನ್ನೆಲೆಗೆ ಬಂದಿದೆ. ಖ್ಯಾತ ಉದ್ಯಮಿ ಪುತ್ರಿ ಜೊತೆ ನಟನ ಮದುವೆ ನಿಶ್ಚಯವಾಗಿದೆ ಎಂದ ವದಂತಿ ಹಬ್ಬಿತ್ತು. ಆದರೆ, ನಟನ ಆಪ್ತರು ಸ್ಪಷ್ಟನೆ ನೀಡಿ, ಆ ವಿಚಾರ ಸುಳ್ಳು ಎಂದು ಹೇಳಿದ್ದಾರೆ.
ಹೈದರಾಬಾದ್ ಉದ್ಯವಿಯ ಮಗಳೊಂದಿಗೆ ನಟನ ಮದುವೆ ಫಿಕ್ಸ್ ಆಗಿದೆ. ಸದ್ಯದಲ್ಲೇ ಅವರು ಹಸೆಮಣೆ ಏರಲಿದ್ದಾರೆ ಎಂಬೆಲ್ಲಾ ಸುದ್ದಿ ಹರಡಿತ್ತು. ಇದಕ್ಕೆ ನಟನ ಆಪ್ತರು ಪ್ರತಿಕ್ರಿಯಿಸಿ, ಪ್ರಭಾಸ್ ಮದುವೆ ಆಗಲಿರುವ ವಿಚಾರ ಸುಳ್ಳು. ಇದೊಂದು ವದಂತಿ, ಇದನ್ನೆಲ್ಲಾ ನಂಬಬೇಡಿ ಎಂದು ಮನವಿ ಮಾಡಿದ್ದಾರೆ.