Select Your Language

Notifications

webdunia
webdunia
webdunia
webdunia

ಹೆಂಡ್ತಿಗೆ ಮುದ್ದು ರಾಕ್ಷಸಿ ಕರೆಯುತ್ತೇನೆ ಎಂದು ದರ್ಶನ್ ಹೇಳಿದ್ದಕ್ಕೆ ನೆಟ್ಟಿಗರು ಹೀಗೆ ಟ್ರೋಲ್ ಮಾಡೋದಾ

Darshan

Krishnaveni K

ಬೆಂಗಳೂರು , ಶುಕ್ರವಾರ, 28 ಮಾರ್ಚ್ 2025 (11:18 IST)
ಬೆಂಗಳೂರು: ವಾಮನ ಟ್ರೈಲರ್ ಲಾಂಚ್ ವೇಳೆ ದರ್ಶನ್ ತನ್ನ ಗೆಳೆಯ ಧನ್ವೀರ್ ಗೌಡಗಾಗಿ ವಿಡಿಯೋ ಸಂದೇಶವೊಂದನ್ನು ನೀಡಿದ್ದರು. ಇದರಲ್ಲಿ ತಮ್ಮ ಹೆಂಡತಿಗೆ ಮುದ್ದಾಗಿ ಮುದ್ದು ರಾಕ್ಷಸಿ ಎನ್ನುತ್ತೇನೆ ಎಂದು ದರ್ಶನ್ ಹೇಳಿದ್ದರು. ಆದರೆ ಅವರ ಹೇಳಿಕೆಯನ್ನು ನೆಟ್ಟಿಗರು ಭಾರೀ ಟ್ರೋಲ್ ಮಾಡಿದ್ದಾರೆ.

ದರ್ಶನ್ ಮತ್ತು ಪವಿತ್ರಾ ಗೌಡ ನಡುವೆ ಇದ್ದಿದ್ದ ಸಂಬಂಧ ಎಲ್ಲರಿಗೂ ಗೊತ್ತೇ ಇದೆ. ಇದೇ ಪವಿತ್ರಾ ಗೌಡಗೆ ಅಶ್ಲೀಲ ಸಂದೇಶ ಕಳುಹಿಸುತ್ತಿದ್ದು ಎಂಬ ಕಾರಣಕ್ಕೆ ರೇಣುಕಾಸ್ವಾಮಿಯನ್ನು ಚಿತ್ರದುರ್ಗದಿಂದ ಕರೆಸಿ ಥಳಿಸಿ ಹತ್ಯೆ ಮಾಡಲಾಗಿದೆ ಎಂಬುದು ಅವರ ಮೇಲಿನ ಆರೋಪ. ಈ ಸಂಬಂಧ ಈಗಾಗಲೇ ಅವರು ಕೆಲವು ದಿನ ಜೈಲುವಾಸವನ್ನೂ ಅನುಭವಿಸಿ ಬಂದಿದ್ದಾರೆ.

ಅವರು ಹೊರಬರಲು ಪತ್ನಿ ವಿಜಯಲಕ್ಷ್ಮಿ ಪರಿಶ್ರಮವೇ ಕಾರಣ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಇದಾದ ಬಳಿಕ ದರ್ಶನ್ ಮತ್ತು ಪತ್ನಿ ವಿಜಯಲಕ್ಷ್ಮಿ ಮತ್ತಷ್ಟು ಹತ್ತಿರವಾಗಿದ್ದಾರೆ. ಇದುವರೆಗೆ ಪತ್ನಿ ಬಗ್ಗೆ ದರ್ಶನ್ ಎಲ್ಲೂ ಬಾಯ್ಬಿಟ್ಟು ಏನೂ ಮಾತನಾಡುತ್ತಿರಲಿಲ್ಲ. ಆದರೆ ಈಗ ಎಲ್ಲೇ ಹೋದರೂ ಪತ್ನಿ ಜೊತೆಗೇ ಇರುತ್ತಾರೆ. ವಿಶೇಷವೆಂದರೆ ಈಗ ವಾಮನ ಸಿನಿಮಾದ ಹಾಡು ನೋಡಿ ಅದರಲ್ಲಿ ಬರುವ ಮುದ್ದು ರಾಕ್ಷಸಿ ಹಾಡಿನ ಬಗ್ಗೆ ಮಾತನಾಡಿದ್ದಾರೆ. ಆ ಹಾಡು ನನಗೆ ತುಂಬಾ ಇಷ್ಟ. ನನ್ನ ಹೆಂಡತಿಯನ್ನೂ ಕೆಲವೊಮ್ಮೆ ಮುದ್ದು ರಾಕ್ಷಸಿ ಎಂದು ಮುದ್ದಾಗಿ ಕರೆಯುತ್ತೇನೆ ಎಂದು ಹೇಳಿಕೊಂಡಿದ್ದಾರೆ.

ಅವರ ಈ ಮಾತನ್ನು ಕೆಲವರು ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡಿದ್ದಾರೆ. ಯಾವ ಹೆಂಡತಿ ಬಗ್ಗೆ ಹೇಳಿದ್ದೀರಿ ಎಂದು ಕೆಲವರು ಕಾಲೆಳೆದಿದ್ದಾರೆ. ಮತ್ತೆ ಕೆಲವರು ಅಂತೂ ಹೆಂಡತಿ ಬಗ್ಗೆ ಮುಕ್ತವಾಗಿ ಮಾತನಾಡುತ್ತಿದ್ದೀರಲ್ಲ, ನಿಮ್ಮ ಸಂಬಂಧದ ಬಗ್ಗೆ ಇರುವ ಅನುಮಾನಗಳೆಲ್ಲಾ ಈಗ ಕೆಲವರಿಗೆ ಕ್ಲಿಯರ್ ಆಗಿರಬಹುದು ಎಂದು ಡಿ ಬಾಸ್ ಫ್ಯಾನ್ಸ್ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಡಿಕೆ ಶಿವಕುಮಾರ್ ಮಗಳು ಐಶ್ವರ್ಯಾ ಬಗ್ಗೆ ನಟಿ ರಮ್ಯಾ ಬರೆದಿದ್ದು ನೋಡಿದ್ರೆ ನಿಮಗೆ ಅಚ್ಚರಿಯಾಗುತ್ತದೆ