ಬೆಂಗಳೂರು: ಬಿಗ್‌ಬಾಸ್ ಸೀಸನ್ 11ರಲ್ಲಿ ನಟಿ ಗೌತಮಿ ಜಾಧವ್ ಪ್ರತಿ ಕ್ಷಣದಲ್ಲೂ ಸ್ಮರಿಸಿಕೊಳ್ಳುತ್ತಿದ್ದ ಹಾಗೂ ಆರಾಧಿಸುತ್ತಿದ್ದ ವನದುರ್ಗಾ ದೇವಸ್ಥಾನಕ್ಕೆ ನಟ ಉಗ್ರ ಮಂಜು ಅವರು ಫ್ಯಾಮಿಲಿ ಸಮೇತ ಭೇಟಿ ನೀಡಿದ್ದಾರೆ.
ತಂದೆ ಹಾಗೂ ತಾಯಿಯ ಜತೆ ಉಗ್ರಂ ಮಂಜು ಅವರು ವನದುರ್ಗಾ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಈ ವೇಳೆ ಗೌತಮಿ ಹಾಗೂ ಅವರ ಪತಿ ಕೂಡಾ ಇದ್ದರೂ. ಭೇಟಿಯ ಫೋಟೋಗಳನ್ನು ಉಗ್ರಂ ಮಂಜು ಅವರು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಗೌತಮಿ ಜಾಧವ್ ಅವರು ಬಿಗ್‌ಬಾಸ್ ಮನೆಗೆ ಕಾಲಿಟ್ಟ ದಿನದಿಂದಲೂ ವನದುರ್ಗಾ ದೇವಿಯನ್ನು ತುಂಬಾನೇ ಆರಾಧಿಸುತ್ತಿದ್ದರು. ಇನ್ನೂ ಗೌತಮಿ ಅವರು ಆರಾಧಿಸುವ ರೀತಿ ನೋಡಿ ಈ ವನದುರ್ಗಾ ದೇವಿಯ ಮಹಿಮೆಯ ಬಗ್ಗೆ ಹುಡುಕಾಟವು ಜಾಸ್ತಿಯಾಗಿತ್ತು. ಈ ದೇವಸ್ಥಾನವು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿದೆ.
ಬಿಗ್‌ಬಾಸ್ ಸೀಸನ್ 11ರಲ್ಲಿ ತಮ್ಮ ಗೆಳೆತನದ ಮೂಲಕವೇ ಉಗ್ರಂ ಮಂಜು ಹಾಗೂ ಗೌತಮಿ ಜಾಧವ್ ಗುರುತಿಸಿಕೊಂಡಿದ್ದರು. ಇವರಿಬ್ಬರ ಸ್ನೇಹದ ಬಗ್ಗೆ ನಾನಾ ಮಾತುಗಳು ಬಂದಿದ್ದವು. ಆದರೆ ಇವರಿಬ್ಬರು ದೊಡ್ಮನೆಯಿಂದ ಆಚೆ ಬಂದ್ಮೇಲೂ ಒಳ್ಳೆಯ ಸ್ನೇಹವನ್ನು ಮುಂದುವರೆಸಿಕೊಂಡು ಹೋಗಿದ್ದಾರೆ.