ಜೀ ಕನ್ನಡದ ಸತ್ಯ ಸೀರಿಯಲ್ ಮೂಲಕ ಬಣ್ಣದ ಬದುಕಿನಲ್ಲಿ ಖ್ಯಾತಿ ಗಳಿಸಿ, ಬಿಗ್‌ಬಾಸ್ ಪ್ರವೇಶಿ, ತನ್ನದೇ ಆದ ಆಟದ ವೈಖರಿಯಲ್ಲಿ ಜನಮನ್ನಣೆ ಗಳಿಸಿದ ಗೌತಮಿ ಜಾದವ್ ಅವರು ಕಳೆದ ವಾರ ಬಿಗ್‌ಬಾಸ್ ಮನೆಯಿಂದ ಹೊರಬಂದಿದ್ದಾರೆ. ಇದೀಗ ಗೌತಮಿ ಅವರ ವೈಯಕ್ತಿಕ ಬದುಕಿನ ಬಗ್ಗೆ ಹುಡುಕಾಟ ಜಾಸ್ತಿಯಾಗಿದೆ.
ಸೀರಿಯಲ್‌ಗೆ ಪಾದಾರ್ಪಣೆ ಮಾಡುವ ಮುನ್ನವೇ ಗೌತಮಿ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಗೌತಮಿ ಅವರು ಮಾವ ಹೆಸರಾಂತ ಪತ್ರಕರ್ತ. ಕನ್ನಡ ಸಿನಿಮಾ ಲೋಕದ ಪ್ರಸಿದ್ಧ ಪತ್ರಕರ್ತರಲ್ಲಿ ಒಬ್ಬರಾಗಿರುವ ಗಣೇಶ್ ಕಾಸರಗೋಡು. ಇವರ ಮಗ ಅಭಿಷೇಕ್ ಅವರನ್ನು ಗೌತಮಿ ಅವರು ಮದುವೆಯಾಗಿರುವುದು.
ಗಣೇಶ್ ಕಾಸರಗೋಡು ಅವರ ಪ್ರಕಟಿತ ಕೃತಿಗಳಲ್ಲಿ ನೆನಪಿನಂಗಳದಲ್ಲಿ ಶಂಕರನಾಗ್; ಬೆಳ್ಳಿ ತೆರೆಯ ಅಮೃತ ಕಳಶ: ರವಿಚಂದ್ರನ್; ಗುರಿ-ಹೆಗ್ಗುರಿ; ಕನ್ನಡದ ಕಣ್ಮಣಿ : ಕಾಳಿಂಗರಾಯರು; ಪ್ರೀಮಿಯರ್ ಬಸವರಾಜಯ್ಯ; ಬಣ್ಣ ಮಾಸಿದ ಬದುಕು, ನೂರು ಚಿತ್ರಗಳು - ನೂರಾರು ನೆನಪುಗಳು-ಚಿಗುರಿದ ಕನಸುಗಳು; ಸ್ಫೂರ್ತಿಯ ಸೆಲೆ: ರಮೇಶ್ ಅರವಿಂದ್; ಆಫ್ ದಿ ರೆಕಾರ್ಡ್; ಚದುರಿದ ಚಿತ್ರಗಳು; ಮೌನ ಮಾತಾದಾಗ; ಹೇಗಿದ್ದ ಹೇಗಾದ ಗೊತ್ತಾ?; ಶುಭಂ: ಹಳೆಯ ಸಿನಿಮಾದ ಕೊನೆಯ ಫ್ರೇಮು; ಕನ್ನಡ ಚಿತ್ರರಂಗದ ಲೆಜೆಂಡ್‍ಗಳ ಕೊನೆಯ ದಿನಗಳು ಮುಂತಾದವು ಸೇರಿವೆ.
ಅನೇಕ ಕನ್ನಡ ಸಿನಿ ಸಾಧಕರ ಬದುಕನ್ನು ಸಂದರ್ಶನ ಮಾಡಿ ಗುರುತಿಸಿಕೊಂಡಿದ್ದಾರೆ.
ಗಣೇಶ್ ಕಾಸರಗೋಡು ಅವರ ಟಿವಿ ಕಾರ್ಯಕ್ರಮಗಳಲ್ಲಿ ಬಣ್ಣ ಮಾಸಿದ ಬದುಕು, ಚದುರಿದ ಚಿತ್ರಗಳು, ಅಂತರಂಗ - ಬಹಿರಂಗ, ಮಾನಸ ಸರೋವರ, ತಾರೆಯರ ಮನೆ - ಮನ, ಚಿತ್ರರಂಜಿನಿ, ಮೂವರು ತಾರೆಯರ ಅಂತರಂಗ ಬಹಿರಂಗ : ವಿಷ್ಣುವರ್ದನ್ - ಅಂಬರೀಷ್ -ಶಂಕರನಾಗ್ ಮುಂತಾದ ವೈವಿಧ್ಯಗಳಿವೆ.