ಮೈಸೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಕಾಡುತ್ತಿದ್ದ ಬೆನ್ನುನೋವು ಆಪರೇಷನ್ ಇಲ್ಲದೆಯೇ ಕಡಿಮೆಯಾಗಿದ್ದು, ಸದ್ಯಕ್ಕೆ ಶಸ್ತ್ರಚಿಕಿತ್ಸೆ ಅಗತ್ಯವಿಲ್ಲ ಎನ್ನಲಾಗಿದೆ.
ನಟ ದರ್ಶನ್ ಅವರ ಬೆನ್ನು ನೋವಿವಾಗಿ ಕಳೆದ ವಾರ ಮೈಸೂರಿನ ವೈದ್ಯ ಡಾ. ಅಜಯ್ ಹೆಗ್ಡೆ ನೀಡಿದ್ದ ಎಪಿಡ್ಯೂರಲ್ ಇಂಜೆಕ್ಷನ್ ಕೆಲಸ ಮಾಡಿದೆ. ಹೀಗಾಗಿ ಕೊಲೆ ಆರೋಪಿ ದರ್ಶನ್‌ಗೆ ಸದ್ಯಕ್ಕೆ ಆಪರೇಷನ್ ಅವಶ್ಯಕತೆ ಇಲ್ಲ. ನಾನು ಮೊದಲಿಗಿಂತಲೂ ಚೆನ್ನಾಗಿದ್ದೇನೆ ಎಂದು ವೈದ್ಯರಿಗೆ ದರ್ಶನ್ ದೂರವಾಣಿ ಮೂಲಕ ಹೇಳಿದ್ದಾರೆ.
ಕಳೆದ ವಾರ ಕೊಟ್ಟ ಇಂಜೆಕ್ಷನ್‌ನಿಂದ ದರ್ಶನ್ ಬೆನ್ನು ನೋವಿನಲ್ಲಿ ಬಹಳಷ್ಟು ಸುಧಾರಣೆ ಆಗಿದೆ. ಬಹುತೇಕ ಇಂಜೆಕ್ಷನ್‌ನಿಂದಲೇ ನೋವು ನಿವಾರಣೆಯಾಗುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ಈಗಾಗಲೇ ಪ್ರತಿನಿತ್ಯ ವರ್ಕೌಟ್ ಶುರು ಮಾಡಿರುವ ದರ್ಶನ್ ಫುಲ್ ಬಾಡಿ ವರ್ಕೌಟ್ ಶುರು ಮಾಡಿದ ನಂತರ ಏನಾದರು ನೋವು ಕಾಣಿಸಿಕೊಂಡರೆ ಮತ್ತೆ ಪರೀಕ್ಷೆಗೆ ಒಳಪಡಲಿದ್ದಾರೆ ಎಂದು ತಿಳಿದುಬಂದಿದೆ.
ಫೆಬ್ರುವರಿಯಿಂದ ಶೂಟಿಂಗ್‌ನಲ್ಲಿ ನಿರಂತರವಾಗಿ ಭಾಗವಹಿಸುವ ನಟ ದರ್ಶನ್ ದೇಹವನ್ನು ಮೊದಲಿನ ರೀತಿ ತರಲು ವರ್ಕೌಟ್‌ಗಳನ್ನು ಹೆಚ್ಚು ಮಾಡಿಕೊಳ್ಳುತ್ತಿದ್ದಾರೆ. ವೈದ್ಯರ ಸಲಹೆಯಂತೆ ಮತ್ತೆ ಎಂದಿನ ಶೈಲಿಯಲ್ಲೇ ದರ್ಶನ್ ನಿಧಾನವಾಗಿ ಜಿಮ್‌ನಲ್ಲಿ ಕಸರತ್ತು ಆರಂಭಿಸಿದ್ದಾರೆ.