ಮಂಡ್ಯ: ಜಿಲ್ಲೆಯ ಪಾಂಡವಪುರದಲ್ಲಿ ಬೇಬಿಬೆಟ್ಟ ಜಾತ್ರಾ ಮಹೋತ್ಸವದಲ್ಲಿ ನಡೆದ ಸಾಮೂಹಿಕ ವಿವಾಹದಲ್ಲಿ ನವಜೋಡಿಗೆ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರು ಮಾಂಗಲ್ಯ ನೀಡಿ ಶುಭಕೋರಿದರು.
24 ಮಂದಿ ನವ ವಧು-ವರರು ನೂತನ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಬೇಬಿ ಬೆಟ್ಟದಲ್ಲಿ ಪ್ರತಿ ವರ್ಷ ರಾಸುಗಳ ಜಾತ್ರೆ ವೇಳೆ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಯುತ್ತದೆ. ೀ ಭಾರಿಯೂ ಅದ್ಧೂರಿಯಾಗಿ ಸಾಮೂಹಿಕ ವಿವಾಹ ನಡೆಯಿತು.
ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರ ನೇತೃತ್ವದಲ್ಲಿ ಸರಳ ಸಾಮೂಹಿಕ ವಿವಾಹ ನಡೆಯಿತು. ಸಾಮೂಹಿಕ ವಿವಾಹಕ್ಕೆ ವಿಜಯಲಕ್ಷ್ಮಿ ದರ್ಶನ್, ನಟ ಚಿಕ್ಕಣ್ಣ, ನಟ ಧನ್ವೀರ್ ಅವರು ಭಾಗವಹಿಸಿದ್ದರು. ನವಜೋಡಿಗೆ ವಿಜಯಲಕ್ಷ್ಮಿ ಅವರು ಮಾಂಗಲ್ಯ ವಿತರಣೆ ಮಾಡಿದರು. ನಟ ಧನ್ವೀರ್ ಅವರು ವಾಚ್ ವಿತರಣೆ ಮಾಡಿದರೆ, ಹಾಸ್ಯನಟ ಚಿಕ್ಕಣ್ಣ ಅವರು ಸೀರೆ, ಪಂಚೆ-ಶರ್ಟ್ ವಿತರಣೆ ಮಾಡಿದರು.
ವೇದಿಕೆ ಮೇಲೆ ಮಾತನಾಡಿದ ವಿಜಯಲಕ್ಷ್ಮಿ ದರ್ಶನ್, ಸರಳ ಸಾಮೂಹಿಕ ವಿವಾಹದಲ್ಲಿ ಭಾಗವಹಿಸಿ ದಾಂಪತ್ಯ ಜೀವನಕ್ಕೆ ಕಾಲಿಟುತ್ತಿರುವುದು ಒಳ್ಳೆಯ ನಿರ್ಧಾರ, ದಾಂಪತ್ಯ ಜೀವನಕ್ಕೆ ಕಾಲಿಟ್ಟ ನವಜೋಡಿಗಳು ಜೀವನ ಸುಖ, ನೆಮ್ಮದಿ ದೊರಕಲಿ, ರೈತರು ಮತ್ತು ರೈತರ ಮಕ್ಕಳಿಗೆ ಒಳ್ಳೆಯದಾಗಲಿ ಎಂದು ಶುಭಹಾರೈಸಿದರು.