ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 12 ರಲ್ಲಿ ಪ್ರಮುಖ ಸ್ಪರ್ಧಿಯಾಗಿದ್ದ ಗಿಲ್ಲಿ ಈಗ ಯಾಕೋ ಬರ ಬರುತ್ತಾ ರಾಯರ ಕುದುರೆ ಕತ್ತೆಯಾಯ್ತು ಎನ್ನುವ ಪರಿಸ್ಥಿತಿಯಲ್ಲಿದ್ದಾರೆ.
ಸಹ ಸ್ಪರ್ಧಿ ರಾಶಿಕಾ ಬಟ್ಟೆಗಳನ್ನು ಬಿಸಾಕಿ, ಹೆಣ್ಣು ಮಕ್ಕಳ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂಬ ಕಾರಣಕ್ಕೆ ಗಿಲ್ಲಿ ನಟನ ಮೇಲೆ ಪ್ರಕರಣ ದಾಖಲಾಗಿದೆ. ಗಿಲ್ಲಿ ವಿರುದ್ಧ ಮಹಿಳಾ ಆಯೋಗಕ್ಕೆ ದೂರು ನೀಡಲಾಗಿತ್ತು.
ಇದು ಇಷ್ಟಕ್ಕೇ ನಿಂತಿಲ್ಲ ಮೊದ ಮೊದಲು ಈ ಸೀಸನ್ ಗೆಲ್ಲುವ ಸ್ಪರ್ಧಿ ಎನ್ನುವಷ್ಟು ಭರವಸೆ ಮೂಡಿಸಿದ್ದ ಗಿಲ್ಲಿ ಯಾಕೋ ಎರಡು ವಾರಗಳಿಂದ ಕಾಮಿಡಿ ಮಾಡಲು ಹೋಗಿ ಕಾಮಿಡಿ ಪೀಸ್ ಆಗುತ್ತಿದ್ದಾರೆಯೇ ಎನ್ನುವ ಅನುಮಾನ ಬರುತ್ತಿದೆ.
ಟಾಸ್ಕ್ ನಲ್ಲೂ ಗಂಭೀರವಾಗಿರಬೇಕಾದ ಸಂದರ್ಭದಲ್ಲಿ ಕಾಮಿಡಿ ಮಾಡಲು ಹೋಗಿ ಕಿಚ್ಚ ಸುದೀಪ್ ಕೆಂಗಣ್ಣಿಗೆ ಗುರಿಯಾಗಿದ್ದರು. ಕಾವ್ಯಾ ಜೊತೆಗಿನ ಅವರ ಜಗಳದಿಂದ ಮನೆ ಮಂದಿಗೆಲ್ಲಾ ರೇಷನ್ ಇಲ್ಲದಂತಾಗಿದೆ. ಇದೀಗ ಮನೆಯವರೆಲ್ಲಾ ಗಿಲ್ಲಿ ವಿರುದ್ಧ ತಿರುಗಿಬಿದ್ದಿದ್ದಾರೆ. ಈ ಮೊದಲು ಹೊಗಳಿ ಅಟ್ಟಕ್ಕೇರಿಸುತ್ತಿದ್ದ ಪ್ರೇಕ್ಷಕರೇ ಈಗ ಗಿಲ್ಲಿ ಬಗ್ಗೆ ಬೇಸರ ಹೊರಹಾಕುತ್ತಿದ್ದಾರೆ. ಈ ಮೂಲಕ ತಾವೇ ಸೃಷ್ಟಿ ಮಾಡಿದ್ದ ಇಮೇಜ್ ಹಾಳು ಮಾಡಿಕೊಂಡು ಗೆಲ್ಲುವ ಅವಕಾಶವನ್ನು ಕೈ ಚೆಲ್ಲಿದ್ದಾರೆ.