ಹೈದರಾಬಾದ್: ಮಹೇಶ್ ಬಾಬು ನಾಯಕರಾಗಿರುವ ತಮ್ಮ ಮುಂಬರುವ ವಾರಣಾಸಿ ಸಿನಿಮಾ ಟೈಟಲ್ ಟೀಸರ್ ಲಾಂಚ್ ನಲ್ಲಿ ನಿರ್ದೇಶಕ ರಾಜಮೌಳಿ ಆಂಜನೇಯ ಸ್ವಾಮಿಯನ್ನು ಬೈದಿದ್ದು ವಿವಾದಕ್ಕೆ ಕಾರಣವಾಗಿದೆ.
ಆರ್ ಆರ್ ಆರ್ ಬಳಿಕ ರಾಜಮೌಳಿ ನಿರ್ದೇಶಿಸುತ್ತಿರುವ ಹೊಸ ಸಿನಿಮಾ ವಾರಣಾಸಿ. ಇದರ ಟೈಟಲ್ ಟೀಸರ್ ಲಾಂಚ್ ಈವೆಂಟ್ ನ್ನು ರಾಜಮೌಳಿ ಅದ್ಧೂರಿಯಾಗಿ ಆಯೋಜಿಸಿದ್ದರು. ಈ ವೇಳೆ ಟೀಸರ್ ಪರದೆ ಮೇಲೆ ಬರಲು ಕೊಂಚ ತಾಂತ್ರಿಕ ಸಮಸ್ಯೆಯಾಯಿತು.
ಇದರಿಂದ ರಾಜಮೌಳಿ ಹತಾಶೆಗೊಳಗಾದರು. ಇಷ್ಟೊಂದು ಜನ ಸೇರಿದ್ದ ಕಾರ್ಯಕ್ರಮದಲ್ಲಿ ವಿಡಿಯೋ ಕ್ಲಿಪ್ ತೆರೆ ಮೇಲೆ ಬರಲು ತೊಂದರೆಗಳಾದಾಗ ರಾಜಮೌಳಿ ಹತಾಶೆಯಿಂದ ಹನುಮಾನ್ ದೇವರಿಗೆ ಬೈದಿದ್ದಾರೆ.
ನಾನು ಹೆಚ್ಚು ದೇವರನ್ನು ನಂಬುವವನಲ್ಲ. ಆದರೆ ನನ್ನ ತಂದೆ ಯಾವತ್ತೂ ಹೇಳುತ್ತಿದ್ದರು. ಆಂಜನೇಯ ಸ್ವಾಮಿ ಯಾವತ್ತೂ ನಿನ್ನ ಜೊತೆಗಿರುತ್ತಾರೆ ಎನ್ನುತ್ತಿದ್ದರು. ಆದರೆ ಇದೇನಾ ಹನುಮಂತನ ನನ್ನ ಜೊತೆಗಿದ್ದಿದ್ದು? ನನ್ನ ಪತ್ನಿ ಯಾವಾಗಲೂ ಹನುಮಂತನ ಪೂಜೆ ಮಾಡುತ್ತಾಳೆ. ಅವನನ್ನು ತನ್ನ ಫ್ರೆಂಡ್ ಎನ್ನುವ ರೀತಿ ಮಾತನಾಡುತ್ತಾಳೆ. ಆದರೆ ಆ ಹನುಮಂತ ಹೀಗೇನಾ ಮಾಡೋದು ಎಂದು ಬೈದಿದ್ದಾರೆ. ಇದೀಗ ವಿವಾದಕ್ಕೆ ಕಾರಣವಾಗಿದೆ.
ತಾಂತ್ರಿಕ ಸಮಸ್ಯೆಯಾಗಿದ್ದಕ್ಕೆ ಹಿಂದೂಗಳು ಆರಾಧಿಸುವ ಹನುಮಂತನನ್ನು ಬೈಯುವುದು ಎಷ್ಟು ಸರಿ ಎಂದು ಪ್ರಶ್ನೆ ಮಾಡಿದ್ದಾರೆ. ಇನ್ನು ಕೆಲವರು ಇದನ್ನು ದೊಡ್ಡ ವಿವಾದ ಮಾಡಬೇಕಾಗಿಲ್ಲ. ಏನೋ ವಿಡಿಯೋ ಕ್ಲಿಪ್ ಬಾರದೇ ಇದ್ದಾಗ ಹತಾಶೆಯಿಂದ ಈ ರೀತಿ ಮಾಡಿದ್ದಾರೆ. ಅದನ್ನು ದೊಡ್ಡದು ಮಾಡುವುದು ಬೇಡ. ರಾಜಮೌಳಿಗೆ ಹಿಂದೂ ದೇವರ ಬಗ್ಗೆ ಅಪಾರ ಗೌರವವಿದೆ. ಇದಕ್ಕೆ ಅವರ ಸಿನಿಮಾಗಳೇ ಸಾಕ್ಷಿ ಎಂದಿದ್ದಾರೆ.