ಎಸ್.ಎಸ್. ರಾಜಮೌಳಿ ಅವರ SSMB29 ಚಿತ್ರಕ್ಕೆ ಪ್ರಿಯಾಂಕಾ ಚೋಪ್ರಾ ಭಾರಿ ಮೊತ್ತಕ್ಕೆ ಸಹಿ ಹಾಕಿದ್ದಾರೆ ಎಂದು ವರದಿಯಾಗಿದೆ. ಈ ಮೂಲಕ ಅವರು ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ದೀಪಿಕಾ ಪಡುಕೋಣೆ, ಆಲಿಯಾ ಭಟ್, ಕರೀನಾ ಕಪೂರ್ ಮತ್ತು ನಯನತಾರಾ ಅವರಂತಹ ಇತರ ಜನಪ್ರಿಯ ನಟಿಯರ ಸಂಭಾವನೆಯನ್ನು ಪ್ರಿಯಾಂಕಾ ಚೋಪ್ರಾ ಮೀರಿಸಿದ್ದಾರೆ.
ಪ್ರಿಯಾಂಕಾ ಚೋಪ್ರಾ ತಮ್ಮ ನಿರೀಕ್ಷಿತ ಪುನರಾಗಮನದೊಂದಿಗೆ ಮತ್ತೆ ಭಾರತೀಯ ಚಲನಚಿತ್ರೋದ್ಯಮವನ್ನು ಆಳಲು ಸಜ್ಜಾಗಿದ್ದಾರೆ. 2019 ರ ದಿ ಸ್ಕೈ ಈಸ್ ಪಿಂಕ್ ಚಿತ್ರದಲ್ಲಿ ಕೊನೆಯ ಬಾರಿಗೆ ಕಾಣಿಸಿಕೊಂಡ ನಟಿ, ತಮ್ಮ ಮುಂದಿನ ಚಿತ್ರಕ್ಕಾಗಿ ₹30 ಕೋಟಿ ರೂ.ಗಳ ಬೃಹತ್ ಮೊತ್ತಕ್ಕೆ ಸಹಿ ಹಾಕಿದ್ದಾರೆ.
ಎಸ್.ಎಸ್. ರಾಜಮೌಳಿ ಅವರ ನಿರ್ದೇಶನದ ಮುಂದಿನ ಚಿತ್ರಕ್ಕೆ ಪ್ರಿಯಾಂಕಾ ಚೋಪ್ರಾ ₹30 ಕೋಟಿ ಪಡೆಯಲಿದ್ದಾರೆ. ಈ ಮೂಲಕ ಭಾರತೀಯ ಚಿತ್ರರಂಗದಲ್ಲಿ ಅತೀ ಹೆಚ್ಚು ಸಂಭಾವನೆ ಪಡೆದ ಖ್ಯಾತಿಗೆ ಪ್ರಿಯಾಂಕಾ ಚೋಪ್ರಾ ಪಾತ್ರರಾಗಿದ್ದಾರೆ. ಈ ಸಿನಿಮಾದಲ್ಲಿ ನಟನಾಗಿ ಮಹೇಶ್ ಬಾಬು ಅವರು ಅಭಿನಯಿಸಲಿದ್ದಾರೆ.
ಪ್ರಿಯಾಂಕಾಗಿಂತ ಮೊದಲು, ಅತಿ ಹೆಚ್ಚು ಸಂಭಾವನೆ ಪಡೆಯುವ ಭಾರತೀಯ ನಟಿ ದೀಪಿಕಾ ಪಡುಕೋಣೆ, ಅವರಿಗೆ ಕಲ್ಕಿ 2898 AD ಗಾಗಿ ₹20 ಕೋಟಿ ಚೆಕ್ ನೀಡಲಾಯಿತು. ಆಲಿಯಾ ಭಟ್ ಪ್ರತಿ ಚಿತ್ರಕ್ಕೆ ₹15 ಕೋಟಿ ಪಡೆಯುತ್ತಾರೆ. ಕರೀನಾ ಕಪೂರ್, ಕತ್ರಿನಾ ಕೈಫ್, ಕಿಯಾರಾ ಅಡ್ವಾಣಿ, ನಯನತಾರಾ ಮತ್ತು ಸಮಂತಾ ರುತ್ ಪ್ರಭು ಅವರು ಪ್ರತಿ ಸಿನಿಮಾಗೆ ₹10 ಕೋಟಿ ಪಡೆಯುತ್ತಾರೆ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.