Select Your Language

Notifications

webdunia
webdunia
webdunia
webdunia

ಆ.2ರಂದು ಒಟಿಟಿಗೆ ಬರಲಿದೆ ರಾಜಮೌಳಿಯ ಡಾಕ್ಯುಮೆಂಟರಿ, ಕುತೂಹಲ ಹೆಚ್ಚಿಸಿದ ಟ್ರೇಲರ್

ಆ.2ರಂದು ಒಟಿಟಿಗೆ ಬರಲಿದೆ ರಾಜಮೌಳಿಯ ಡಾಕ್ಯುಮೆಂಟರಿ, ಕುತೂಹಲ ಹೆಚ್ಚಿಸಿದ ಟ್ರೇಲರ್

Sampriya

ಮುಂಬೈ , ಸೋಮವಾರ, 22 ಜುಲೈ 2024 (16:44 IST)
Photo Courtesy X
ಮುಂಬೈ: ಭಾರತೀಯ ಚಿತ್ರರಂಗದ ಖ್ಯಾತ ನಿರ್ದೇಶಕ ಎಸ್‌ಎಸ್‌ ರಾಜಮೌಳಿ ಅವರ ಜೀವನವನ್ನು ಆಧರಿಸಿದ 'ಮಾಡರ್ನ್ ಮಾಸ್ಟರ್ಸ್' ಸಾಕ್ಷ್ಯಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ.

ಟ್ರೇಲರ್ ಬಿಡುಗಡೆ ಮಾಡಿದ ತಂಡ ಆಗಸ್ಟ್ 2ರಂದು ನೆಟ್‌ಫ್ಲಿಕ್ಸ್‌ನಲ್ಲಿ ಡಾಕ್ಯುಮೆಂಟರಿ ಬಿಡುಗಡೆಯಾಗಲಿದೆ ಎಂದು ಹೇಳಿದೆ.

 ನೆಟ್‌ಫ್ಲಿಕ್ಸ್ ಅಪ್ಲಾಸ್ ಎಂಟರ್‌ಟೈನ್‌ಮೆಂಟ್ ಮತ್ತು ಫಿಲ್ಮ್ ಕಂಪ್ಯಾನಿಯನ್ ಸ್ಟುಡಿಯೋಸ್‌ ಸಹಯೋಜನೆಯೊಂದಿಗೆ ಈ ಡಾಕ್ಯುಮೆಂಟರಿ ನಿರ್ಮಾಣಗೊಂಡಿದೆ.  ರಾಘವ್ ಖನ್ನಾ ಅವರು ಡಾಕ್ಯುಮೆಂಟರಿಯನ್ನು ನಿರ್ದೇಶನ ಮಾಡಿದ್ದಾರೆ.  ಸಾಕ್ಷ್ಯಚಿತ್ರವು ಆಗಸ್ಟ್ 2 ರಂದು OTT ವೇದಿಕೆಯಲ್ಲಿ ಬಿಡುಗಡೆಯಾಗಲಿದೆ.

ಟ್ರೇಲರ್‌ ಭಾರೀ ಕುತೂಹಲ ಮೂಡಿಸಿದ್ದು,  ಸಾಕ್ಷ್ಯಚಿತ್ರದ ಮೂಲಕ ರಾಜಮೌಳಿ ಅವರ ಬಗೆಗಿನ ಮತ್ತಷ್ಟು ವಿಚಾರಗಳು ಬೆಳಕಿಗೆ ಬರಲಿದೆ.  

ರಾಜಮೌಳಿ ಅವರ ಬಗ್ಗೆ  ಜೂನಿಯರ್ ಎನ್‌ಟಿಆರ್,  ರಾಮ್ ಚರಣ್, ಪ್ರಭಾಸ್, ಚಿತ್ರನಿರ್ಮಾಪಕ ಕರಣ್ ಜೋಹರ್ ಸೇರಿದಂತೆ ಗಣ್ಯರು ರಾಜಮೌಳಿ ಬಗ್ಗೆ ಮಾತನಾಡಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ದರ್ಶನ್ ಗೆ ಧೈರ್ಯ ಹೇಳಲು ಬಂದ ವಿಜಯಲಕ್ಷ್ಮಿ