ಬೆಂಗಳೂರು: ರೇಣುಕಾಸ್ವಾಮಿ ಕೊಲೆ  ಪ್ರಕರಣದಲ್ಲಿ ಪರಪ್ಪನ ಅಗ್ರಹಾರದಲ್ಲಿ ವಿಚಾರಣಾಧೀನ ಕೈದಿಯಾಗಿರುವ ನಟ ದರ್ಶನ್ ಅವರನ್ನು ಭೇಟಿಯಾಗಲು ವಿನೋದ್ ರಾಜ್ ಆಗಮಿಸಿದ್ದರು. ಇನ್ನೂ ದಿನಕ್ಕೆ ಒಂದೇ ಭೇಟಿ ಅಂತ ಜೈಲು ಅಧಿಕಾರಿಗಳು ಹೇಳಿದ್ದರಿಂದ ವಿನೋದ್ ರಾಜ್ ಅವರು ವಾಪಾಸ್ಸಾಗಿದ್ದಾರೆ.
 
									
			
			 
 			
 
 			
					
			        							
								
																	ಈ ವೇಳೆ ಮಾಧ್ಯಮದ ಜತೆ ಮಾತನಾಡಿದ ಅವರು, ಅಧಿಕಾರಿಗಳು ದಿನದಲ್ಲಿ ಒಂದೇ ಭೇಟಿಗೆ ಅವಕಾಶ ಎಂದು ಹೇಳಿದರು. ಮಧ್ಯಾಹ್ನದ ನಂತರ ಅವರ ಕುಟುಂಬದವರ ಜತೆ ದರ್ಶನ್ ಅವರನ್ನು ಭೇಟಿಯಾಗುತ್ತೇನೆ.
									
										
								
																	ಇನ್ನೂ ರೇಣುಕಾಸ್ವಾಮಿ ಹತ್ಯೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಕೆಲವೊಮ್ಮೆ ಊಹಿಸಲಾಗದ ಘಟನೆಗಳು ನಮ್ಮ ಜೀವನದಲ್ಲಿ ನಡೆದುಹೋಗುತ್ತದೆ. ಸದ್ಯ ದರ್ಶನ್‌ಗೆ ಇದು ಅಗ್ನಿ ಪರೀಕ್ಷೆಯ ಹೊತ್ತು. ನಮ್ಮ ತಾಯಿಗೆ ದರ್ಶನ್ ಮೇಲೆ ತುಂಬಾನೇ ಪ್ರೀತಿ. ಯಾವತ್ತೂ ತೂಗುದೀಪ್‌ರ ಮಗನನ್ನು ಬಿಟ್ಟುಕೊಡಬೇಡ ಎಂದು ಆಗಾಗ ನನಗೆ ಹೇಳುತ್ತಿದ್ದರು ಎಂದು ನೆನಪಿಸಿಕೊಂಡರು.
									
											
							                     
							
							
			        							
								
																	ನಮ್ಮ ತಾಯಿಗೆ ಆರೋಗ್ಯ ಸರಿಯಿಲ್ಲದಾಗ ದರ್ಶನ್ ಅವರು ಬಂದು ಭೇಟಿಯಾಗಿ ಮಾತುಕತೆ ನಡೆಸಿದ್ದರು. ಇಂತಹ ಸಂದರ್ಭದಲ್ಲಿ ಮಗನನ್ನು ಕಳೆದುಕೊಂಡವರ ನೋವು, ಮತ್ತೊಂದೆಡೆ ಕನ್ನಡ ಚಿತ್ರರಂಗಕ್ಕೆ ನೋವಾಗಿದೆ. ಯಾಕೆ ಹೀಗಾಯಿತು ಎಂಬುದು ನೆನಪಿಸಿಕೊಂಡಾಗ ಬೇಜಾರಾಗುತ್ತದೆ ಎಂದರು.