Select Your Language

Notifications

webdunia
webdunia
webdunia
Thursday, 27 February 2025
webdunia

ದರ್ಶನ್ ಗೆ ಧೈರ್ಯ ಹೇಳಲು ಬಂದ ವಿಜಯಲಕ್ಷ್ಮಿ

Darshan-Vijayalakshmi

Krishnaveni K

ಬೆಂಗಳೂರು , ಸೋಮವಾರ, 22 ಜುಲೈ 2024 (16:29 IST)
ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್ ನೋಡಲು ಇಂದು ಅವರ ಪತ್ನಿ ವಿಜಯಲಕ್ಷ್ಮಿ ಮತ್ತು ಸಹೋದರ ದಿನಕರ್ ಬಂದಿದ್ದಾರೆ.

ಇದಕ್ಕೆ ಮೊದಲೂ ವಿಜಯಲಕ್ಷ್ಮಿ ಮತ್ತು ದಿನಕರ್ ಒಟ್ಟಿಗೇ ಬಂದು ದರ್ಶನ್ ಗೆ ಧೈರ್ಯ ಹೇಳಿ ಹೋಗಿದ್ದರು. ಕಳೆದ ವಾರವಷ್ಟೇ ವಿಜಯಲಕ್ಷ್ಮಿ ಬಾವ ದಿನಕರ್ ಹಾಗೂ ಪುತ್ರ ವಿನೀಶ್ ಜೊತೆ ಬಂದಿದ್ದರು. ಈ ವೇಳೆ ಜಾಮೀನು ಸದ್ಯಕ್ಕೆ ಸಿಗಲ್ಲ ಎಂಬ ಶಾಕಿಂಗ್ ಸುದ್ದಿಯನ್ನು ದರ್ಶನ್ ಗೆ ಹೇಳಿ ಧೈರ್ಯವಾಗಿರುವಂತೆ ಹೇಳಿದ್ದರು.

ಇಂದು ಮತ್ತೆ ವಿಜಯಲಕ್ಷ್ಮಿ ಪತಿ ಭೇಟಿಗೆ ಬಂದಿದ್ದಾರೆ. ದರ್ಶನ್ ಗೆ ಕಳೆದ ವಾರ ಜ್ವರ ಬಂದಿತ್ತು. ಹೀಗಾಗಿ ಇಂದು ಅವರ ಆರೋಗ್ಯ ವಿಚಾರಿಸಲು ಬಂದಿದ್ದಾರೆ. ಜೊತೆಗೆ ಮುಂದಿನ ಕೋರ್ಟ್ ಕಲಾಪಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ಪತಿ ದರ್ಶನ್ ರನ್ನು ಬಿಡಿಸಿಕೊಂಡು ಬರಲು ವಿಜಯಲಕ್ಷ್ಮಿ ಮತ್ತು ಸಹೋದರ ದಿನಕರ್ ಇನ್ನಿಲ್ಲದ ಪ್ರಯತ್ನ ಮಾಡುತ್ತಿದ್ದಾರೆ.

ಇಂದು ದರ್ಶನ್ ರನ್ನು ಭೇಟಿ ಮಾಡಲು ನಟ ವಿನೋದ್ ರಾಜ್ ಕೂಡಾ ಬಂದಿದ್ದರು. ಲೀಲಾವತಿ ಕುಟುಂಬದ ಜೊತೆಗೆ ದರ್ಶನ್ ಗೆ ಮೊದಲಿನಿಂದಲೂ ನಂಟಿದೆ. ಹೀಗಾಗಿ ಇದೇ ಪ್ರೀತಿ ವಿಶ್ವಾಸದಿಂದ ವಿನೋದ್ ರಾಜ್ ಜೈಲಿಗೆ ಬಂದಿದ್ದಾರೆ. ಇನ್ನು ದರ್ಶನ್ ಮನೆ ಊಟಕ್ಕಾಗಿ ಕೋರ್ಟ್ ಮೊರೆ ಹೋಗಿದ್ದು ಅದರ ತೀರ್ಪು ಇನ್ನಷ್ಟೇ ಹೊರಬೀಳಬೇಕಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ನನ್ನಮ್ಮ ತೂಗುದೀಪರ ಮಗನನ್ನು ಬಿಟ್ಟುಕೊಡಬೇಡ ಎನ್ನುತ್ತಿದ್ದರು: ವಿನೋದ್ ರಾಜ್