ನವದೆಹಲಿ: ರಾಷ್ಟ್ರಪ್ರಶಸ್ತಿ ವಿಜೇತ ನಟಿ ಕೀರ್ತಿ ಸುರೇಶ್ ಅವರನ್ನು ಯುನಿಸೆಫ್ ಇಂಡಿಯಾದ ಸೆಲೆಬ್ರಿಟಿ ಅಡ್ವೊಕೇಟ್ ಆಗಿ ನೇಮಕ ಮಾಡಲಾಗಿದೆ ಎಂದು ಯುಎನ್ ಸಂಸ್ಥೆ ಇಂದು ಪ್ರಕಟಿಸಿದೆ.
ತಮಿಳು, ತೆಲುಗು ಮತ್ತು ಮಲಯಾಳಂ ಚಿತ್ರರಂಗದಲ್ಲಿ ತನ್ನ ಅಭಿನಯ ಮೂಲಕ ಭಾರೀ ಮೆಚ್ಚುಗೆಗೆ ಕೀರ್ತಿ ಸುರೇಶ್ ಅವರು ಪಾತ್ರರಾಗಿದ್ದಾರೆ.
ದುರ್ಬಲ ಮಕ್ಕಳಿಗಾಗಿ ಯುನಿಸೆಫ್‌ನ ಪ್ರಯತ್ನಗಳನ್ನು ಬೆಂಬಲಿಸುವ ಸಾರ್ವಜನಿಕ ವ್ಯಕ್ತಿಗಳ ವಿಶೇಷ ಗುಂಪನ್ನು ಸೇರಿದ್ದಾರೆ ಎಂದು ಸಂಸ್ಥೆಯ ಹೇಳಿಕೆ ತಿಳಿಸಿದೆ.
ಮಾನಸಿಕ ಆರೋಗ್ಯ, ಶಿಕ್ಷಣ ಮತ್ತು ಲಿಂಗ ಸಮಾನತೆಯಂತಹ ಪ್ರಮುಖ ವಿಷಯಗಳ ಕುರಿತು ಜಾಗೃತಿ ಮೂಡಿಸುವ ಕೆಲಸವನ್ನು ಕೀರ್ತಿ ಸುರೇಶ್ ಮಾಡಲಿದ್ದಾರೆ.
"UNICEF ಇಂಡಿಯಾ ಗೌರವಾನ್ವಿತ ನಟಿ ಕೀರ್ತಿ ಸುರೇಶ್ ಅವರೊಂದಿಗೆ ಪಾಲುದಾರಿಕೆ ಹೊಂದಲು ಸಂತೋಷವಾಗಿದೆ. ಪ್ರೇಕ್ಷಕರೊಂದಿಗೆ ಅವರ ಆಳವಾದ ಸಂಪರ್ಕವು ಮಕ್ಕಳ ಹಕ್ಕುಗಳು ಮತ್ತು ಯೋಗಕ್ಷೇಮಕ್ಕಾಗಿ ಪ್ರತಿಪಾದಿಸಲು ಪ್ರಬಲ ಮತ್ತು ಸ್ಪೂರ್ತಿದಾಯಕ ವೇದಿಕೆಯನ್ನು ಒದಗಿಸುತ್ತದೆ" ಎಂದು UNICEF ಭಾರತದ ಪ್ರತಿನಿಧಿ ಸಿಂಥಿಯಾ ಮೆಕ್‌ಕ್ಯಾಫ್ರಿ ಹೇಳಿದರು.