Select Your Language

Notifications

webdunia
webdunia
webdunia
webdunia

ಜೈ ನಾಳೆ ತೆರೆಗೆ, ಮಾವನ ಸಿನಿಮಾಗೆ ಶುಭ ಹಾರೈಸಿದ ಕೆಎಲ್ ರಾಹುಲ್

KL Rahul

Sampriya

ಮುಂಬೈ , ಗುರುವಾರ, 13 ನವೆಂಬರ್ 2025 (16:33 IST)
Photo Credit X
ಬಿಗ್‌ಬಾಸ್‌ ವಿನ್ನರ್ ರೂಪೇಶ್ ಶೆಟ್ಟಿ ನಿರ್ದೇಶನ ಮಾಡಿ, ನಾಯಕ ನಟನಾಗಿ ಅಭಿನಯಿಸಿರುವ ಜೈ ಸಿನಿಮಾಗೆ ಕ್ರಿಕೆಟಿಗ ಕೆಎಲ್‌ ರಾಹುಲ್‌ ಶುಭ ಹಾರೈಸಿದ್ದಾರೆ. 

ಈ ಸಿನಿಮಾದಲ್ಲಿ ರಾಹುಲ್ ಅವರ ಮಾವ, ಬಹುಭಾಷಾ ನಟ ಸುನೀಲ್ ಶೆಟ್ಟಿ ಕೂಡಾ ಪ್ರಮುಖ ಪಾತ್ರವೊಂದಕ್ಕೆ ಬಣ್ಣ ಹಚ್ಚಿದ್ದಾರೆ.

 ಸಿನಿಮಾ ತಂಡಕ್ಕೆ ಶುಭಹಾರೈಸಿರುವ ರಾಹುಲ್ ಅವರು ‘ನಮಸ್ಕಾರ, ‘ಜೈ’ ಸಿನಿಮಾದ ಟ್ರೇಲರ್ ಅನ್ನು ನಾನು ವೀಕ್ಷಿಸಿದೆ. ಚಿತ್ರಕಥೆ ತುಂಬಾ ಚೆನ್ನಾಗಿದೆ. ಎಲ್ಲರೂ ದಯಮಾಡಿ ಈ ಚಿತ್ರವನ್ನು ನೋಡಿ ನಮ್ಮ ಊರಿನ ಕಲಾವಿದರನ್ನು ಪ್ರೋತ್ಸಾಹಿಸಿ. ರೂಪೇಶ್ ಹಾಗೂ ಅವರ ತಂಡಕ್ಕೆ ಶುಭ ಹಾರೈಸುತ್ತೇನೆ’ ಎಂದಿದ್ದಾರೆ.

ಕೆಲ ದಿನಗಳ ಹಿಂದೆ ಈ ಚಿತ್ರದ ಟ್ರೇಲರ್ ಅನ್ನು ಬೆಂಗಳೂರಿನ ಮಾಲ್ ಒಂದರಲ್ಲಿ ಸುನೀಲ್ ಶೆಟ್ಟಿ ಬಿಡುಗಡೆ ಮಾಡಿದ್ದರು. ಟ್ರೇಲರ್ ಬಿಡುಗಡೆ ಬಳಿಕ ‘ಪಿಲಿನಲಿಕೆ’ ವಾದ್ಯಕ್ಕೆ ಇವರು ಹೆಜ್ಜೆ ಹಾಕಿದ್ದರು.‌ ನಾಳೆ ಈ ಸಿನಿಮಾ ದೊಡ್ಡ ಪರದೆ ಮೇಲೆ ಬರಲಿದ್ದು, ಟ್ರೇಲರ್ ಮೂಲಕ ಭಾರೀ ನಿರೀಕ್ಷೆಯನ್ನು ಮೂಡಿಸಿದೆ. 

ರೂಪೇಶ್ ಶೆಟ್ಟಿಗೆ ಜೋಡಿಯಾಗಿ ನಟಿ ಅದ್ವಿತಿ ಶೆಟ್ಟಿ ನಟಿಸಿದ್ದಾರೆ. ಈಗಾಗಲೇ ಬಿಡುಗಡೆಯಾಗಿರುವ ಈ ಚಿತ್ರದ ‘ಲವ್ ಯು’ ಹಾಡು ಪ್ರೇಕ್ಷಕರ ಗಮನ ಸೆಳೆದಿದೆ.

ಆರ್.ಎಸ್ ಸಿನಿಮಾಸ್, ಶೂಲಿನ್ ಫಿಲಂಸ್, ಮುಗೋಡಿ ಪ್ರೊಡಕ್ಷನ್ ಲಾಂಛನದಲ್ಲಿ ಅನಿಲ್ ಶೆಟ್ಟಿ, ಸುಧಾಕರ ಶೆಟ್ಟಿ ಮುಗೋಡಿ, ಮಂಜುನಾಥ ಅತ್ತಾವರ, ಹಾಗೂ ದೀಕ್ಷಿತ್ ಅವರು ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ. 

Share this Story:

Follow Webdunia kannada

ಮುಂದಿನ ಸುದ್ದಿ

ಈ ರೀತಿ ನಡೆದುಕೊಳ್ಳುವುದಕ್ಕೆ ನಾಚಿಕೆಯಾಗುವುದಿಲ್ವ: ಪಾಪರಾಜಿಗಳ ಮೇಲೆ ಸನ್ನಿ ಡಿಯೋಲ್ ಗರಂ