ಬೆಂಗಳೂರು: ಕರ್ನಾಟಕದ ಸ್ಟಾರ್ ಬ್ಯಾಟರ್– ವಿಕೆಟ್ ಕೀಪರ್ ಕೆ.ಎಲ್. ರಾಹುಲ್ ಅವರು ವಾಲಿಬಾಲ್ ತಂಡವೊಂದಕ್ಕೆ ಸಹ ಮಾಲೀಕರಾಗಿದ್ದಾರೆ.
ಅಕ್ಟೋಬರ್ 2ರಿಂದ 26ರವರೆಗೆ ಹೈದರಾಬಾದ್‌ನಲ್ಲಿ ನಡೆಯಲಿರುವ ಪ್ರೈಮ್ ವಾಲಿಬಾಲ್ ಲೀಗ್‌ನಲ್ಲಿ ಆಡುವ ಗಾರ್ಡಿಯನ್ಸ್ ತಂಡಕ್ಕೆ ರಾಹುಲ್ ಸಹ ಮಾಲೀಕರಾಗಿದ್ದಾರೆ.
33 ವರ್ಷದ ರಾಹುಲ್ ಅವರಿಗೆ ವಾಲಿಬಾಲ್ ಕ್ರೀಡೆಯೆಂದರೆ ಪಂಚಪ್ರಾಣ. ಹೀಗಾಗಿ, ಅವರು ವಾಲಿಬಾಲ್ ತಂಡವನ್ನು ಜಂಟಿಯಾಗಿ ಖರೀದಿಸಿದ್ದಾರೆ.
ಪ್ರೈಮ್ ವಾಲಿಬಾಲ್ ಲೀಗ್‌ನ ನಾಲ್ಕನೇ ಆವೃತ್ತಿಯಲ್ಲಿ ಗಾರ್ಡಿಯನ್ಸ್ ತಂಡವು ಪದಾರ್ಪಣೆ ಮಾಡಲಿದೆ. ಟೂರ್ನಿಯಲ್ಲಿ ಒಟ್ಟು ಒಂಬತ್ತು ತಂಡಗಳು ಪ್ರಶಸ್ತಿಗೆ ಸೆಣಸಾಡಲಿವೆ.
ಈ ಕುರಿತು ಮಾತನಾಡಿದ ರಾಹುಲ್, ವಾಲಿಬಾಲ್ ನನ್ನ ನೆಚ್ಚಿನ ಕ್ರೀಡೆಗಳಲ್ಲಿ ಒಂದು. ಭಾರತದಲ್ಲಿ ಈ ಕ್ರೀಡೆಯನ್ನು ಮತ್ತಷ್ಟು ಬೆಳೆಸಲು ನನ್ನ ಕೊಡುಗೆ ನೀಡಲು ಉತ್ಸುಕನಾಗಿದ್ದೇನೆ ಎಂದು ತಿಳಿಸಿದ್ದಾರೆ.
ತಂಡವೊಂದಕ್ಕೆ ಸಹಮಾಲೀಕನಾಗಿರುವುದು ನನಗೆ ಸಂತಸದ ಕ್ಷಣವಾಗಿದೆ. ಪಿವಿಎಲ್ ಭಾರತೀಯ ಕ್ರೀಡೆಗೆ ಮಹತ್ವದ ತಿರುವು ಇದ್ದಂತೆ. ಈ ಮೂಲಕ ವಾಲಿಬಾಲ್ ಅನ್ನು ಅತಿ ಹೆಚ್ಚು ಜನರು ಪ್ರೀತಿಸುವಂತೆ ಮಾಡಬಹುದು ಎಂದು ಹೇಳಿದ್ದಾರೆ