Select Your Language

Notifications

webdunia
webdunia
webdunia
webdunia

ಆನ್‌ಲೈನ್‌ ಬೆಟ್ಟಿಂಗ್‌ ತಂದ ಸಂಕಷ್ಟ: ಕ್ರಿಕೆಟಿಗ ರಾಬಿನ್‌ ಉತ್ತಪ್ಪಗೆ ಇಡಿ ಗ್ರಿಲ್‌, ನಾಳೆ ಯುವರಾಜ್‌ ಸರದಿ

Cricketer Robin Uthappa, Directorate of Enforcement, Cricketer Yuvraj Singh

Sampriya

ನವದೆಹಲಿ , ಸೋಮವಾರ, 22 ಸೆಪ್ಟಂಬರ್ 2025 (14:29 IST)
Photo Credit X
ನವದೆಹಲಿ: ಕ್ರಿಕೆಟಿಗ ರಾಬಿನ್‌ ಉತ್ತಪ್ಪ ಅವರು ಕಾನೂನುಬಾಹಿರ ಆನ್‌ಲೈನ್‌ನಲ್ಲಿ ಬೆಟ್ಟಿಂಗ್‌ ಹಾಗೂ ಜೂಜಾಟಕ್ಕೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಇಂದು ಜಾರಿ ನಿರ್ದೇಶನಾಲಯದ ಹಾಜರಾಗಿ ವಿಚಾರಣೆ ಎದುರಿಸಿದರು.

ಕನ್ನಡಿಗ ರಾಬಿನ್‌ ಉತ್ತಪ್ಪ ಅವರು ತಮ್ಮ ವಕೀಲರೊಂದಿಗೆ ದೆಹಲಿಯ ಇ.ಡಿ ಕೇಂದ್ರ ಕಚೇರಿಗೆ ಬಂದಿದ್ದು, ವಿಚಾರಣೆಗೆ ಹಾಜರಾಗಿದ್ದಾ. ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆಯಡಿ ಹೇಳಿಕೆ ದಾಖಲಿಸಿಕೊಳ್ಳಲಾಗುತ್ತದೆ ಎಂದು ಇ.ಡಿ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿರುವ ಇ.ಡಿ ಅಧಿಕಾರಿಗಳು ಖ್ಯಾತ ಕ್ರಿಕೆಟಿಗ ಯುವರಾಜ್‌ ಸಿಂಗ್‌ ಹಾಗೂ ನಟ ಸೋನು ಸೂದ್‌ ಅವರಿಗೂ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್‌ ನೀಡಿದ್ದಾರೆ. 1xಬೆಟ್‌ ಆ್ಯಪ್‌ಗೆ ಸಂಬಂಧಿಸಿದಂತೆ ದೆಹಲಿಯ ಇ.ಡಿ ಕೇಂದ್ರ ಕಚೇರಿಯಲ್ಲಿ ಮಂಗಳವಾರ  ಯುವರಾಜ್‌ ಸಿಂಗ್‌, 24ರಂದು ಸೋನು ಸೂದ್‌ ಅವರ ವಿಚಾರಣೆ ನಡೆಸಲಾಗುತ್ತದೆ.

ಕ್ರಿಕೆಟಿಗರಾದ ಸುರೇಶ್‌ ರೈನಾ, ಶಿಖರ್‌ ಧವನ್‌, ಟಿಎಂಸಿ ಮಾಜಿ ಸಂಸದೆ ಮಿಮಿ ಚಕ್ರವರ್ತಿ, ಬಂಗಾಳಿ ನಟ ಅಂಕುಶ್‌ ಹಜ್ರಾ ಅವರನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲಕೇ ವಿಚಾರಣೆ ನಡೆಸಿದೆ. ಆದರೆ, ನಟಿ ಊರ್ವಶಿ ರೌಟೇಲ ವಿಚಾರಣೆಗೆ ಇನ್ನೂ ಹಾಜರಾಗಿಲ್ಲ. 

Share this Story:

Follow Webdunia kannada

ಮುಂದಿನ ಸುದ್ದಿ

Asia Cup Cricket: ಮಾಡೋದೆಲ್ಲಾ ಮಾಡಿ ಟೀಂ ಇಂಡಿಯಾವನ್ನೇ ಚೀಟರ್ ಎಂದ ಪಾಕಿಸ್ತಾನಿಯರು