Select Your Language

Notifications

webdunia
webdunia
webdunia
webdunia

ಭಾರತೀಯ ಸೇನೆಯನ್ನೇ ಅಣಕವಾಡಿದ ಪಾಕಿಸ್ತಾನ ಕ್ರಿಕೆಟಿಗ, ವಿಡಿಯೋ ನೋಡಿದ್ರೆ ರಕ್ತ ಕುದಿಯುತ್ತೆ

IND vs PAK

Krishnaveni K

ದುಬೈ , ಸೋಮವಾರ, 22 ಸೆಪ್ಟಂಬರ್ 2025 (09:41 IST)
Photo Credit: X
ದುಬೈ: ಏಷ್ಯಾ ಕಪ್ ಸೂಪರ್ 4 ಪಂದ್ಯದಲ್ಲಿ ಭಾರತೀಯ ಸೇನೆಯನ್ನು ಅಣಕವಾಡಲು ಹೋದ ಪಾಕಿಸ್ತಾನ ಆಟಗಾರರಿಗೆ ಭಾರತೀಯ ಆಟಗಾರರು ಮುಖಕ್ಕೆ ಮಂಗಳಾರತಿ ಮಾಡಿ ಕಳುಹಿಸಿದ್ದಾರೆ.

ಏಷ್ಯಾ ಕಪ್ ಸೂಪರ್ ಫೋರ್ ಪಂದ್ಯ ಎರಡೂ ದೇಶಗಳಿಗೆ ಪ್ರತಿಷ್ಠೆಯ ಕಣವಾಗಿತ್ತು. ಆಪರೇಷನ್ ಸಿಂಧೂರ್ ಬಳಿಕ ಇದು ಭಾರತ-ಪಾಕಿಸ್ತಾನ ನಡುವೆ ನಡೆಯುತ್ತಿರುವ ಎರಡನೇ ಪಂದ್ಯವಾಗಿದೆ. ಮೊದಲ ಪಂದ್ಯದಲ್ಲಿ ಸೋತು ಸುಣ್ಣವಾಗಿದ್ದ ಪಾಕಿಸ್ತಾನಕ್ಕೆ ಎರಡನೇ ಪಂದ್ಯದಲ್ಲಿ ಆಟದಲ್ಲಿ ಕಿಸಿಯಕ್ಕೆ ಆಗದೇ ಇದ್ದರೂ ಬೇರೆ ಕ್ಯಾತೆಗಳಿಗೆ ಏನೂ ಕೊರತೆಯಿರಲಿಲ್ಲ.

ಅದರಲ್ಲೂ ಪಾಕ್ ಬೌಲರ್ ಹ್ಯಾರಿಸ್ ರೌಫ್ ಫೀಲ್ಡಿಂಗ್ ಮಾಡುವಾಗ ಭಾರತಕ್ಕೆ ಚಿಯರ್ ಅಪ್ ಮಾಡುತ್ತಿದ್ದ ಪ್ರೇಕ್ಷಕರತ್ತ ನೋಡಿ ಕೈ ಸನ್ನೆ ಮೂಲಕವೇ ಭಾರತೀಯ ಸೇನೆಯನ್ನು ಅಣಕಿಸಿದ್ದಾರೆ. ಈ ವಿಡಿಯೋ ನೋಡಿದರೆ ನಿಜಕ್ಕೂ ನಿಮ್ಮ ರಕ್ತ ಕುದಿಯುತ್ತದೆ.

ಇನ್ನು ಅರ್ಧಶತಕ ಸಿಡಿಸಿದ ಫರ್ಹಾನ್  ಬ್ಯಾಟ್ ನ್ನು ಗನ್ ನಂತೆ ಎತ್ತಿ ಭಾರತೀಯರನ್ನು ಅಣಕಿಸಿದ್ದಾರೆ. ಇದೆಲ್ಲದಕ್ಕೂ ಟೀಂ ಇಂಡಿಯಾ ಆಟಗಾರರು ತಕ್ಕ ಉತ್ತರವನ್ನೇ ನೀಡಿದ್ದಾರೆ. ಗನ್ ನಂತೆ ಬ್ಯಾಟ್ ಹಿಡಿದ ಫರ್ಹಾನ್ ಗೆ ಅಭಿಷೇಕ್ ಶರ್ಮಾ ಅರ್ಧಶತಕ ಸಿಡಿಸಿದ ಬಳಿಕ ನಮ್ಮ ಎಸ್-400 ಮುಂದೆ ನಿಮ್ಮ ಗನ್ ಆಟ ನಡೆಯಲ್ಲ ಸನ್ನೆ ಮಾಡಿ ತಿರುಗೇಟು ನೀಡಿದ್ದಾರೆ. ಪಂದ್ಯದ ಬಳಿಕವೂ ಸೂರ್ಯಕುಮಾರ್ ಯಾದವ್ ಪಾಕಿಸ್ತಾನದ ಹೆಸರು ಹೇಳದೇ ಅವರು ನಮ್ಮ ಎದುರಾಳಿ, ಅವರ ಜೊತೆ ಪೈಪೋಟಿ ಎನ್ನುವುದಕ್ಕೂ ಲಾಯಕ್ಕಲ್ಲ ಎಂದು ಅವಮಾನ ಮಾಡಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

Video: ಹೋಗಲೋ ಮುಚ್ಕೊಂಡು ಬಾಲ್ ಹಾಕು: ಹ್ಯಾರಿಸ್ ರೌಫ್ ಗೆ ಅಭಿಷೇಕ್ ಶರ್ಮಾ ಏಟು