ದುಬೈ: ಪಾಕಿಸ್ತಾನ್ ವಿರುದ್ಧ ಏಷ್ಯಾ ಕಪ್ ಸೂಪರ್ ಫೋರ್ ಪಂದ್ಯದಲ್ಲಿ ತನ್ನನ್ನು ಕೆಣಕಲು ಬಂದ ಹ್ಯಾರಿಸ್ ರೌಫ್ ಗೆ ಟೀಂ ಇಂಡಿಯಾ ಓಪನರ್ ಅಭಿಷೇಕ್ ಶರ್ಮಾ ಮುಚ್ಕೊಂಡು ಬಾಲ್ ಹಾಕು ಎಂದು ಖಡಕ್ ಆಗಿ ಉತ್ತರಿಸಿದ್ದಾರೆ.
ಮೈದಾನದಲ್ಲಿ ನಿನ್ನೆ ಪಾಕ್ ಆಟಗಾರರು ಆಟಕ್ಕಿಂತ ಮಾತಿನಲ್ಲೇ ಆಕ್ರಮಣ ಮಾಡುತ್ತಿದ್ದರು. ಬೇಕೆಂದೇ ಟೀಂ ಇಂಡಿಯಾ ಆಟಗಾರರನ್ನು ಕೆಣಕಲು ಯತ್ನಿಸುತ್ತಿದ್ದರು. ಅದರಲ್ಲೂ ಪಾಕ್ ಆಟಗಾರರು ನಿನ್ನೆ ಅಭಿಷೇಕ್ ಶರ್ಮಾರನ್ನೇ ಟಾರ್ಗೆಟ್ ಮಾಡಿದ್ದರು.
ಒಮ್ಮೆ ಶಾಹಿನ್ ಅಫ್ರಿದಿ ಅಭಿಷೇಕ್ ಗೆ ಗುದ್ದಲು ಬಂದವರಂತೆ ಆಡಿದರೆ ಇನ್ನೊಮ್ಮೆ ಹ್ಯಾರಿಸ್ ರೌಫ್ ಅಭಿಷೇಕ್ ಹತ್ತಿರ ಬಂದು ಮಾತಿನ ಚಕಮಕಿ ನಡೆಸಿದರು. ಹ್ಯಾರಿಸ್ ರೌಫ್ ಗೆ ಮಾತಿನಲ್ಲೇ ತಿರುಗೇಟು ನೀಡಿದ ಅಭಿಷೇಕ್ ಶರ್ಮಾ ಹೋಗಿ ಮುಚ್ಕೊಂಡು ಬೌಲಿಂಗ್ ಮಾಡು ಎಂದು ಖಡಕ್ ಆಗಿ ಹೇಳಿದರು. ಬಳಿಕ ಅಂಪಾಯರ್ ಬಂದು ಅವರ ಜಗಳ ಬಿಡಿಸಬೇಕಾಯಿತು.
ಪಂದ್ಯದ ಬಳಿಕ ಇದರ ಬಗ್ಗೆ ಮಾತನಾಡಿದ ಅಭಿಷೇಕ್ ಶರ್ಮಾ, ಅವರು ಬೇಕೆಂದೇ ನನ್ನ ಕೆಣಕುವ ಪ್ರಯತ್ನ ಮಾಡುತ್ತಿದ್ದರು. ಅದು ನನಗೆ ಇಷ್ಟವಾಗಲಿಲ್ಲ. ಅದಕ್ಕೇ ಅವರಿಗೆ ನಾನು ಮುನ್ನುಗ್ಗಿ ಹೊಡೆದೆ ಎಂದರು.