ದುಬೈ: ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯಲ್ಲಿ ಇಂದಿಗೆ ಲೀಗ್ ಹಂತದ ಪಂದ್ಯಗಳು ಮುಕ್ತಾಯವಾಗಲಿದ್ದು ನಾಳೆಯಿಂದ ಸೂಪರ್ 4 ಹಂತದ ಪಂದ್ಯಗಳು ಆರಂಭವಾಗಲಿದೆ. ಸೂಪರ್ 4 ಹಂತದ ವೇಳಾಪಟ್ಟಿ ಇಲ್ಲಿದೆ ನೋಡಿ.
									
			
			 
 			
 
 			
					
			        							
								
																	ಲೀಗ್ ಹಂತದಲ್ಲಿ ಎ ಮತ್ತು ಬಿ ಗುಂಪಿನಿಂದ ಅತೀ ಹೆಚ್ಚು ಗೆಲುವು ಸಾಧಿಸಿದ ತಲಾ 2 ತಂಡಗಳು ಸೂಪರ್ 4 ಹಂತಕ್ಕೇರಿವೆ. ಆ ಪೈಕಿ ಭಾರತ, ಪಾಕಿಸ್ತಾನ, ಶ್ರೀಲಂಕಾ ಮತ್ತು ಬಾಂಗ್ಲಾದೇಶ ತಂಡಗಳು ಸೂಪರ್ 4 ಹಂತಕ್ಕೆ ಅರ್ಹತೆ ಪಡೆದಿವೆ.
									
										
								
																	ಸೂಪರ್ 4 ಹಂತದಲ್ಲಿ ಒಂದೊಂದು ತಂಡಕ್ಕೆ ತಲಾ 3 ಪಂದ್ಯಗಳಂತೆ ಒಟ್ಟು ಐದು ಪಂದ್ಯಗಳು ನಡೆಯಲಿವೆ. ಮೊದಲ ಪಂದ್ಯ ನಾಳೆ ಭಾರತ ಮತ್ತು ಪಾಕಿಸ್ತಾನ ನಡುವೆ ನಡೆಯಲಿದೆ. ಒಟ್ಟು ಮೂರು ಪಂದ್ಯಗಳ ಪೈಕಿ ನಾಲ್ಕು ತಂಡಗಳಲ್ಲಿ ಮೊದಲ ಎರಡು ಸ್ಥಾನ ಗಳಿಸಿದ ತಂಡಗಳು ಫೈನಲ್ ಪಂದ್ಯವಾಡಲಿದೆ.
									
											
							                     
							
							
			        							
								
																	ವೇಳಾಪಟ್ಟಿ ಇಲ್ಲಿದೆ:
ಸೆ.21       ಭಾರತ ವರ್ಸಸ್ ಪಾಕಿಸ್ತಾನ್           ರಾತ್ರಿ 8 ಗಂಟೆಗೆ
ಸೆ.23       ಪಾಕಿಸ್ತಾನ್ ವರ್ಸಸ್ ಶ್ರೀಲಂಕಾ        ರಾತ್ರಿ 8 ಗಂಟೆಗೆ
ಸೆ.24       ಭಾರತ ವರ್ಸಸ್ ಬಾಂಗ್ಲಾದೇಶ         ರಾತ್ರಿ 8 ಗಂಟೆಗೆ
ಸೆ.25       ಪಾಕಿಸ್ತಾನ್ ವರ್ಸಸ್ ಬಾಂಗ್ಲಾದೇಶ   ರಾತ್ರಿ 8 ಗಂಟೆಗೆ
ಸೆ.26       ಭಾರತ ವರ್ಸಸ್ ಶ್ರೀಲಂಕಾ                ರಾತ್ರಿ 8 ಗಂಟೆಗೆ
ಸೆ.28       ಫೈನಲ್                                               ರಾತ್ರಿ 8 ಗಂಟೆಗೆ