ದುಬೈ: ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯಲ್ಲಿ ಟೀಂ ಇಂಡಿಯಾ ವಿರುದ್ಧ ಶೇಕ್ ಹ್ಯಾಂಡ್ ವಿವಾದವನ್ನೇ ಇಟ್ಟುಕೊಂಡು ಹೈಡ್ರಾಮಾ ಮಾಡಿದ ಪಾಕಿಸ್ತಾನಕ್ಕೆ ಏನೂ ಗಿಟ್ಟಲಿಲ್ಲ. ಹೀಗಾಗಿ ಈಗ ಮತ್ತೊಂದು ತಗಾದೆ ತೆಗೆಯಲು ಮುಂದಾಗಿದೆ.
ಪಂದ್ಯದ ಬಳಿಕ ಭಾರತೀಯ ಆಟಗಾರರು ಕೈ ಕುಲುಕಲಿಲ್ಲ. ಇದಕ್ಕೆ ಮ್ಯಾಚ್ ರೆಫರಿಯೇ ಕಾರಣ. ಅವರು ಭಾರತದ ಪರವಾಗಿ ಇದ್ದಾರೆ. ಹೀಗಾಗಿ ಅವರನ್ನು ಕಿತ್ತು ಹಾಕಬೇಕು ಎಂದು ಹೈಡ್ರಾಮಾ ಮಾಡಿದ ಪಾಕಿಸ್ತಾನಕ್ಕೆ ಐಸಿಸಿ ಕ್ಯಾರೇ ಎಂದಿರಲಿಲ್ಲ.
ಇದೀಗ ಭಾರತೀಯ ನಾಯಕ ಸೂರ್ಯಕುಮಾರ್ ಯಾದವ್ ರನ್ನು ಇಟ್ಟುಕೊಂಡು ಪಾಕಿಸ್ತಾನ ಐಸಿಸಿಗೆ ದೂರು ನೀಡಲು ಮುಂದಾಗಿದೆ. ಸೂರ್ಯಕುಮಾರ್ ಯಾದವ್ ಪಂದ್ಯ ಗೆದ್ದ ಬಳಿಕ ಗೆಲುವನ್ನು ಭಾರತೀಯ ಸೇನೆಗೆ ಅರ್ಪಿಸಿದ್ದರು.
ಹೀಗಾಗಿ ಇದನ್ನೇ ಮುಂದಿಟ್ಟುಕೊಂಡು ಐಸಿಸಿಗೆ ದೂರು ಕೊಡಲು ಮುಂದಾಗಿದೆ. ಪಂದ್ಯ ಮುಗಿದ ಬಳಿಕ ಗೆಲುವನ್ನು ಭಾರತೀಯ ಸೇನೆಗೆ ಅರ್ಪಿಸಿದ್ದರು. ಇದೇ ಕಾರಣನ್ನು ನೀಡಿ ಈಗ ಪಾಕಿಸ್ತಾನ ಐಸಿಸಿಗೆ ದೂರು ನೀಡಲು ಮುಂದಾಗಿದೆ. ಭಾರತ ಈ ಮೂಲಕ ಕ್ರೀಡೆಯಲ್ಲಿ ರಾಜಕೀಯ ಬೆರೆಸಿದೆ ಎಂದು ಆರೋಪಿಸಿದೆ.