ದುಬೈ: ಭಾರತ ಮತ್ತು ಪಾಕಿಸ್ತಾನ ನಡುವಿನ ಶೇಕ್ ಹ್ಯಾಂಡ್ ಗಲಾಟೆಯಲ್ಲಿ ಬಲಿ ಕಾ ಬಕರಾ ಆಗಿದ್ದು ಮ್ಯಾಚ್ ರೆಫರಿ ಆಂಡಿ ಪೈಕ್ರಾಫ್ಟ್.
ಪಾಕಿಸ್ತಾನ ವಿರುದ್ಧದ ಪಂದ್ಯದ ಬಳಿಕ ಟೀಂ ಇಂಡಿಯಾ ಆಟಗಾರರು ಕೈ ಕುಲುಕದೇ ಪೆವಿಲಿಯನ್ ಗೆ ಮರಳಿದ್ದು ದೊಡ್ಡ ವಿವಾದವಾಗಿದೆ. ಇತ್ತ ಟೀಂ ಇಂಡಿಯಾ ಆಟಗಾರರು ಮಾತ್ರ ಯಾವುದಕ್ಕೂ ತಲೆಕೆಡಿಸಿಕೊಳ್ಳದೇ ತಮ್ಮ ಕೆಲಸದಲ್ಲಿ ತಾವು ಮುಳುಗಿದ್ದರೆ ಪಾಕಿಸ್ತಾನ ಮಾತ್ರ ಮ್ಯಾಚ್ ರೆಫರಿ ಮೇಲೆ ಸಿಟ್ಟು ಹೊರಹಾಕಿತ್ತು.
ಅಸಲಿಗೆ ಭಾರತ ಕೈ ಕುಲುಕದೇ ಇರುವಲ್ಲಿ ತನ್ನ ಪಾತ್ರವೇನು ಎಂಬುದು ಬಹುಶಃ ಆಂಡಿ ಪೈಕ್ರಾಫ್ಟ್ ಗೂ ಇನ್ನೂ ಗೊತ್ತಿರಲಿಕ್ಕಿಲ್ಲ. ಆದರೆ ಪಾಕಿಸ್ತಾನ ತಂಡ ಮಾತ್ರ ತನ್ನ ಹಠ ಸಾಧಿಸಲು ಮ್ಯಾಚ್ ರೆಫರಿಯನ್ನು ಬಲಿಪಶು ಮಾಡಿದೆ. ನೇರವಾಗಿ ಬಿಸಿಸಿಐ ಮತ್ತು ಐಸಿಸಿಯನ್ನು ಎದುರು ಹಾಕಿಕೊಂಡರೆ ನಷ್ಟ ತನಗೇ ಎನ್ನುವುದು ಪಾಕಿಸ್ತಾನಕ್ಕೂ ಗೊತ್ತು. ಆ ಕಾರಣಕ್ಕೆ ರೆಫರಿ ನೆಪವೊಡ್ಡಿದೆ.
ಇದೇ ಕಾರಣಕ್ಕೆ ಈಗ ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ಮ್ಯಾಚ್ ರೆಫರಿಯನ್ನು ಫುಲ್ ಟ್ರೋಲ್ ಮಾಡಿದ್ದಾರೆ. ಕೈ ಕುಲುಕದೇ ಇದ್ದಿದ್ದು ಟೀಂ ಇಂಡಿಯಾ ಈ ಪಾಕಿಸ್ತಾನ ತಂಡ ನನ್ನ ಹಿಂದೆ ಯಾಕೆ ಬಿದ್ದಿದೆ ಎಂದು ಸ್ವತಃ ಪೈಕ್ರಾಫ್ಟ್ ತಲೆಕೆರೆದುಕೊಂಡು ಕೂತಿರಬಹುದು ಎಂದು ನೆಟ್ಟಿಗರು ತಮಾಷೆ ಮಾಡಿದ್ದಾರೆ.