Select Your Language

Notifications

webdunia
webdunia
webdunia
webdunia

ಏಷ್ಯಾ ಕಪ್ ಬಹಿಷ್ಕರಿಸ್ತೀವಿ ಎಂದ ಪಾಕ್: ಆಡದಿದ್ರೆ ಏನೂ ನಷ್ಟವಿಲ್ಲ ಎಂದು ನೆಟ್ಟಿಗರು

IND vs PAK

Krishnaveni K

ದುಬೈ , ಮಂಗಳವಾರ, 16 ಸೆಪ್ಟಂಬರ್ 2025 (09:55 IST)
ದುಬೈ: ಹ್ಯಾಂಡ್ ಶೇಕ್ ಘಟನೆಯಿಂದ ನಮಗೆ ಅವಮಾನವಾಗಿದೆ. ಮ್ಯಾಚ್ ರೆಫರಿ ಕಿತ್ತು ಹಾಕದಿದ್ದರೆ ನಾವು ಏಷ್ಯಾ ಕಪ್ ಆಡಲ್ಲ ಎಂದು ಪಾಕಿಸ್ತಾನ ಬೆದರಿಕೆ ಹಾಕಿದೆ. ಆದರೆ ಇದಕ್ಕೆ ನೆಟ್ಟಿಗರ ಪ್ರತಿಕ್ರಿಯೆ ನೋಡಿ.

ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯದ ಬಳಿಕ ಟೀಂ ಇಂಡಿಯಾ ಆಟಗಾರರು ಎದುರಾಳಿಗಳು ಕಾಯುತ್ತಿದ್ದರೂ ಕೈ ಕುಲುಕದೇ ಪೆವಿಲಿಯನ್ ಗೆ ತೆರಳಿದ್ದರು. ಈ ವಿಚಾರ ಈಗ ಭಾರೀ ವಿವಾದಕ್ಕೆ ಕಾರಣವಾಗಿದೆ. ಈ ಬಗ್ಗೆ ಪಾಕಿಸ್ತಾನ ಐಸಿಸಿಗೂ ದೂರು ಸಲ್ಲಿಸಿದೆ.

ಆದರೆ ನಿಯಮದಲ್ಲಿ ಶೇಕ್ ಹ್ಯಾಂಡ್ ಮಾಡುವ ನಿಯಮವಿಲ್ಲ. ಹೀಗಾಗಿ ಇದರಿಂದ ಭಾರತಕ್ಕೆ ಹೆಚ್ಚಿನ ಪರಿಣಾಮವಾಗದು. ಆದರೆ ಭಾರತದಿಂದ ಅವಮಾನಿತರಾಗಿರುವ ಪಾಕಿಸ್ತಾನ ತಂಡ ನಾವು ಏಷ್ಯಾ ಕಪ್ ಆಡಲ್ಲ ಎಂದು ಬೆದರಿಕೆ ಹಾಕುತ್ತಿದೆ.

ಇದಕ್ಕೆ ನೆಟ್ಟಿಗರು ಪ್ರತಿಕ್ರಿಯಿಸಿದ್ದು ಆಡದಿದ್ದರೆ ಕತ್ತೆ ಬಾಲ ಕುದುರೆ ಜುಟ್ಟು ಎಂದಿದ್ದಾರೆ. ನೀವು ಆಡದೇ ಇದ್ದರೆ ಭಾರತಕ್ಕೆ ಏನೂ ನಷ್ಟವಾಗಲ್ಲ. ಹೇಗಿದ್ದರೂ ಕಪ್ ಗೆಲ್ಲೋದು ನಾವೇ. ನೀವು ಭಯೋತ್ಪಾದಕರನ್ನು ಸೃಷ್ಟಿಸುವ ದೇಶದವರು. ನಿಮಗೆ ಬೆದರಿಕೆ ಹಾಕುವುದೇ ಕೆಲಸ ಎಂದು ಕಾಲೆಳೆದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಏಷ್ಯಾ ಕಪ್ ನಲ್ಲಿ ಭಾರತ, ಪಾಕಿಸ್ತಾನ ಮತ್ತೊಮ್ಮೆ ಮುಖಾಮುಖಿ ಪಕ್ಕಾ: ಆಗೇನಾಗುತ್ತೋ