ಏಷ್ಯಾ ಕಪ್ 2025 ರ ಪಂದ್ಯ 6ರ ಅಂತ್ಯದಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವಿನ ನೋ ಹ್ಯಾಂಡ್‌ಶೇಕ್ ಎಪಿಸೋಡ್ ಭಾರಿ ವಿವಾದಕ್ಕೆ ಕಾರಣವಾಗುತ್ತಿದೆ. ಇದೀಗ ಪಾಕಿಸ್ತಾನ ಈ ಸಂಬಂಧ ಐಸಿಸಿ ಕದ ತಟ್ಟಿದೆ.
ಕೂಡಲೇ ಪಂದ್ಯದ ರೆಫರಿಯನ್ನು ತೆಗೆದುಹಾಕುವಂತೆ ಒತ್ತಾಯಿಸಿದೆ.
ಪಾಕಿಸ್ತಾನ ಕ್ರಿಕೆಟ್ ತಂಡವು ಭಾರತ ಕ್ರಿಕೆಟಿಗರ ನಡವಳಿಗೆ ಪಾಕ್ ಮಂಡಳಿಯು ಈಗ ಐಸಿಸಿಗೆ ತಲುಪಿದೆ. ರೆಫರಿಯನ್ನು ತೆಗೆದುಹಾಕಬೇಕೆಂದು ಒತ್ತಾಯಿಸಿದೆ.
ಪಹಲ್ಗಾಮ್ ದಾಳಿಯಿಂದಾಗಿ ಪಾಕ್ ಜತೆಗಿನ ಪಂದ್ಯಾಟಕ್ಕೆ ಭಾರತದಲ್ಲಿ ವಿರೋಧ ವ್ಯಕ್ತವಾಗಿತ್ತು. ಟಾಸ್ ವೇಳೆಯೂ ಭಾರತ ಹಾಗೂ ಪಾಕ್‌ನ ಕ್ಯಾಪ್ಟನ್‌ಗಳು ಶೇಕ್ ಹ್ಯಾಂಡ್ ಮಾಡಲಿಲ್ಲ.
ಇನ್ನೂ ಪಂದ್ಯ ಗೆದ್ದು ಬೀಗಿದ ಭಾರತ, ಪಾಕ್ ಆಟಗಾರರಿಗೆ ಸಂಪ್ರದಾಯಿಕ ಶೇಕ್ ಹ್ಯಾಂಡ್ ಮಾಡದೆ ಡ್ರೆಸ್ಸಿಂಗ್ ರೂಂ ಹೋಗಿ ಬಾಗಿಲು ಹಾಕಿತು.
ಪಾಕ್ ಆಟಗಾರರ ಶೇಕ್ ಹ್ಯಾಂಡ್‌ಗೆ ಕಾಯುತ್ತಿದ್ದ ಹಾಗೇ ಭಾರತದ ಕ್ರಿಕೆಟಿಗರು ಬಾಗಿಲನ್ನು ಮುಚ್ಚಿ ತಮ್ಮ ಅಸಮಾಧಾನವನ್ನು ಈ ಮೂಲಕ ಹೊರಹಾಕಿದ್ದರು.
ಸಾಂಪ್ರದಾಯಿಕ ಹ್ಯಾಂಡ್‌ಶೇಕ್‌ಗಳಲ್ಲಿ ಭಾಗವಹಿಸದಿರುವ ಕಾರಣದಿಂದ ಮುಜುಗರಕ್ಕೊಳಗಾದ ಹಿನ್ನೆಲೆ ಪಾಕ್ ಇದೀಗ ಐಸಿಸಿಗೆ ದೂರು ನೀಡಿದೆ.
"ಐಸಿಸಿ ನೀತಿ ಸಂಹಿತೆ ಮತ್ತು ಕ್ರಿಕೆಟ್ ಸ್ಪಿರಿಟ್‌ಗೆ ಸಂಬಂಧಿಸಿದ ಎಂಸಿಸಿ ಕಾನೂನುಗಳ ಮ್ಯಾಚ್ ರೆಫರಿ ಉಲ್ಲಂಘನೆಗಳ ಬಗ್ಗೆ ಪಿಸಿಬಿ ಐಸಿಸಿಗೆ ದೂರು ನೀಡಿದೆ. ಏಷ್ಯಾಕಪ್‌ನಿಂದ ಮ್ಯಾಚ್ ರೆಫರಿಯನ್ನು ತಕ್ಷಣವೇ ತೆಗೆದುಹಾಕುವಂತೆ ಪಿಸಿಬಿ ಒತ್ತಾಯಿಸಿದೆ" ಎಂದು ಪಿಸಿಬಿ ಮತ್ತು ಏಷ್ಯಾ ಕಪ್ ಮುಖ್ಯಸ್ಥ ಮೊಹ್ಸಿನ್ ನಖ್ವಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.