Select Your Language

Notifications

webdunia
webdunia
webdunia
webdunia

ಭಾರತದವ್ರು ಕೈಕುಲುಕಿಲ್ಲ, ಅದಕ್ಕೇ ನಾವೂ ಹೀಗೆ ಸೇಡು ತೀರಿಸಿಕೊಂಡ್ವಿ: ಪಾಕಿಸ್ತಾನ ಕೋಚ್ ಹೇಳಿಕೆ

Mike Hesson

Krishnaveni K

ದುಬೈ , ಸೋಮವಾರ, 15 ಸೆಪ್ಟಂಬರ್ 2025 (10:56 IST)
Photo Credit: X
ದುಬೈ: ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯಲ್ಲಿ ಪಾಕಿಸ್ತಾನದ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ ಬಳಿಕ ಟೀಂ ಇಂಡಿಯಾ ಎದುರಾಳಿಗಳ ಕೈಕುಲುಕದೇ ಅವಮಾನ ಮಾಡಿದೆ. ಇದಕ್ಕೆ ಪ್ರತಿಯಾಗಿ ಪಾಕ್ ನಾಯಕ ಸಲ್ಮಾನ್ ಅಘಾ ಪಂದ್ಯಶ್ರೇಷ್ಠ ಪ್ರಶಸ್ತಿ ಸಮಾರಂಭಕ್ಕೆ ಗೈರಾಗಿದ್ದರು. ಇದರ ಬಗ್ಗೆ ಪಾಕ್ ಕೋಚ್ ಮೈಕ್ ಹಸನ್ ಸ್ಪಷ್ಟನೆ ನೀಡಿದ್ದಾರೆ.

ಪಂದ್ಯದ ಬಳಿಕ ನಾವು ಭಾರತೀಯ ಆಟಗಾರರಿಗೆ ಕಾಯುತ್ತಿದ್ದೆವು. ಅವರು ಕೈಕುಲುಕಲು ಬರಬಹುದು ಎಂದು ಅಂದುಕೊಂಡಿದ್ದೆವು. ಆದರೆ ಅವರು ಬರದೇ ಪೆವಿಲಿಯನ್ ಗೆ ಹೋದರು. ಹೀಗಾಗಿ ನಮಗೆ ನಿರಾಶೆಯಾಯಿತು. ಇದೇ ಕಾರಣಕ್ಕೆ ಸಲ್ಮಾನ್ ಅಘಾ ಕೂಡಾ ಹಾಗೆ ಮಾಡಬೇಕಾಯಿತು ಎಂದಿದ್ದಾರೆ.

ಈ ಮೂಲಕ ಪಾಕಿಸ್ತಾನ ಕೂಡಾ ನಾವು ತಿರುಗೇಟು ನೀಡಿದ್ದಾಗಿ ಹೇಳಿಕೊಂಡಿದೆ. ಈ ವಿಚಾರ ಈಗ ಸಾಕಷ್ಟು ಚರ್ಚೆಯಾಗುತ್ತಿದೆ. ಪಾಕಿಸ್ತಾನ ಮಾಧ್ಯಮಗಳು ಇದು ನಮ್ಮ ದೇಶಕ್ಕೇ ಮಾಡಿದ ಅವಮಾನ ಎಂದು ಬಣ್ಣಿಸಿವೆ.

Share this Story:

Follow Webdunia kannada

ಮುಂದಿನ ಸುದ್ದಿ

ಟೀಂ ಇಂಡಿಯಾ ಮಾಡಿದ ಅವಮಾನಕ್ಕೆ ಪ್ರಶಸ್ತಿ ಸಮಾರಂಭದಿಂದಲೇ ಪಾಕಿಸ್ತಾನ ನಾಯಕ ಗಾಯಬ್