ದುಬೈ: ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ಲೈವ್ ಆಗಿ ಟೆಲಿಕಾಸ್ಟ್ ಆಗಿದ್ದು ಒಳ್ಳೇದಾಯ್ತು. ಇಲ್ಲಾಂದ್ರೆ ನಾವೇ ಗೆದ್ದಿದ್ದು ಎಂದು ಪಾಕಿಸ್ತಾನ ಹೇಳಿಕೊಳ್ಳುತ್ತಿತ್ತು.
ಹೀಗಂತ ಈಗ ಪಾಕಿಸ್ತಾನ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಟ್ರೋಲ್ ಆಗುತ್ತಿದೆ. ನಿನ್ನೆಯ ಪಂದ್ಯವನ್ನು ಭಾರತ 7 ವಿಕೆಟ್ ಗಳಿಂದ ಗೆದ್ದುಕೊಂಡಿತು. ಬೌಲಿಂಗ್, ಬ್ಯಾಟಿಂಗ್ ಎರಡರಲ್ಲೂ ಟೀಂ ಇಂಡಿಯಾ ಭರ್ಜರಿ ಪ್ರದರ್ಶನ ನೀಡಿತ್ತು. ಪಹಲ್ಗಾಮ್ ದಾಳಿ ನಡೆದ ಬಳಿಕ ನಡೆಯುತ್ತಿರುವ ಮೊದಲ ಭಾರತ-ಪಾಕಿಸ್ತಾನ ಪಂದ್ಯ ಇದಾಗಿತ್ತು.
ಹೀಗಾಗಿ ಸಹಜವಾಗಿಯೇ ಅಭಿಮಾನಿಗಳಲ್ಲಿ ಆಕ್ರೋಶವಿತ್ತು. ಪಂದ್ಯ ಬಹಿಷ್ಕಾರಕ್ಕೂ ಕರೆ ನೀಡಲಾಗಿತ್ತು. ಆದರೆ ಅಂತೂ ಇಂತೂ ಪಂದ್ಯ ನಡೆದು ಭಾರತ ಗೆಲುವು ಸಾಧಿಸಿದ ಬಳಿಕ ಟೀಂ ಇಂಡಿಯಾ ಮಾಜಿ ವೇಗಿ ಇರ್ಫಾನ್ ಪಠಾಣ್ ಎದುರಾಳಿಗಳನ್ನು ಸಖತ್ ಟ್ರೋಲ್ ಮಾಡಿದ್ದಾರೆ.
ಸದ್ಯ ಈ ಪಂದ್ಯ ಲೈವ್ ಆಗಿತ್ತು. ಇಲ್ಲಾಂದ್ರೆ ನಾವೇ ಗೆದ್ದಿದ್ದು ಎಂದು ಪಾಕಿಸ್ತಾನ ಹೇಳಿಕೊಂಡು ತಿರುಗಾಡುತ್ತಿತ್ತು ಎಂದಿದ್ದಾರೆ. ಆಪರೇಷನ್ ಸಿಂಧೂರ್ ಸಮಯದಲ್ಲೂ ಸೋತು ಮಣ್ಣು ಮಕ್ಕಿದ್ರೂ ನಾವೇ ಗೆದ್ದಿದ್ದು ಎಂದು ಪಾಕಿಸ್ತಾನ ಬೀದಿಯಲ್ಲಿ ಮೆರವಣಿಗೆ ಮಾಡಿತ್ತು. ಇದೇ ಕಾರಣಕ್ಕೆ ಇರ್ಫಾನ್ ಪಠಾಣ್ ಹಾಗೂ ಸಾಕಷ್ಟು ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಇದೇ ರೀತಿ ಟ್ರೋಲ್ ಮಾಡಿದ್ದಾರೆ.