Select Your Language

Notifications

webdunia
webdunia
webdunia
webdunia

ಏಷ್ಯಾ ಕಪ್ ಬಹಿಷ್ಕರಿಸ್ತೀನಿ ಎಂದಿದ್ದ ಪಾಕಿಸ್ತಾನಕ್ಕೆ ಶುರುವಾಗಿತ್ತು ಜಯ್ ಶಾ ಭಯ

Jay Shah

Krishnaveni K

ಕರಾಚಿ , ಬುಧವಾರ, 17 ಸೆಪ್ಟಂಬರ್ 2025 (10:00 IST)
ಕರಾಚಿ: ಮ್ಯಾಚ್ ರೆಫರಿಯನ್ನು ಕಿತ್ತು ಹಾಕದಿದ್ದರೆ ಏಷ್ಯಾ ಕಪ್ ಬಹಿಷ್ಕರಿಸ್ತೀವಿ ಎಂದಿದ್ದ ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ನಂತರ ತಣ್ಣಗಾಗಿತ್ತು. ಇದಕ್ಕೆ ಕಾರಣ ಜಯ್ ಶಾ ಎನ್ನಲಾಗಿದೆ.

ಏಷ್ಯಾ ಕಪ್ ನಲ್ಲಿ ಭಾರತದ ವಿರುದ್ಧದ ಪಂದ್ಯದಲ್ಲಿ ಅವರು ಕೈ ಕುಲುಕದೇ ನಮಗೆ ಅವಮಾನ ಮಾಡಿದ್ದಾರೆ ಎಂದು ಸಿಟ್ಟಿಗೆದ್ದಿದ್ದ ಪಾಕಿಸ್ತಾನ ಹೀಗೆ ಮಾಡಲು ಹೇಳಿದ್ದೇ ಮ್ಯಾಚ್ ರೆಫರಿ. ಅವರನ್ನು ಕಿತ್ತು ಹಾಕದಿದ್ದರೆ ಏಷ್ಯಾ ಕಪ್ ಕೂಟದಿಂದಲೇ ಹೊರ ನಡೆಯುತ್ತೇವೆ ಎಂದು ವೀರಾ ವೇಷದ ಮಾತನಾಡಿ ಕೊನೆಗೆ ತಣ್ಣಗಾಗಿತ್ತು.

ಇದಕ್ಕೆ ಕಾರಣ ಜಯ್ ಶಾ ಭಯ ಎನ್ನಲಾಗಿದೆ. ಭಾರತದ ಜಯ್ ಶಾ ಐಸಿಸಿ ಮುಖ್ಯಸ್ಥರು. ಒಂದು ವೇಳೆ ಪಾಕಿಸ್ತಾನ ಏಷ್ಯಾ ಕಪ್ ನಿಂದ ಹೊರ ನಡೆದರೆ ಜಯ್ ಶಾ ದೊಡ್ಡ ಮೊತ್ತದ ದಂಡ ಕಟ್ಟಲು ಸೂಚಿಸುತ್ತಿದ್ದರು. ಇದನ್ನು ಭರಿಸುವಷ್ಟು ಆರ್ಥಿಕವಾಗಿ ಪಾಕ್ ಮಂಡಳಿ ಸಮರ್ಥವಾಗಿಲ್ಲ.

ಹೀಗಾಗಿ ಈ ರಗಳೆಯೇ ಬೇಡ ಎಂದು ಕೂಟ ಬಹಿಷ್ಕರಿಸುವ ಬೆದರಿಕೆಯಿಂದ ಹಿಂದೆ ಸರಿದಿದೆ. ಆದರೆ ಪತ್ರಿಕಾಗೋಷ್ಠಿ ಬಹಿಷ್ಕಾರ, ಪ್ರಶಸ್ತಿ ಸಮಾರಂಭಕ್ಕೆ ಗೈರಾಗುವ ಮೂಲಕ ತನ್ನ ಪ್ರತಿಭಟನೆ ವ್ಯಕ್ತಪಡಿಸುತ್ತಿದೆ. ಆದರೆ ಇದಕ್ಕೆ ಯಾರೂ ಕ್ಯಾರೇ ಎನ್ನುತ್ತಿಲ್ಲ.

Share this Story:

Follow Webdunia kannada

ಮುಂದಿನ ಸುದ್ದಿ

ಸೆಲೆಬ್ರಿಟಿಗಳಿಗೆ ವಿಶೇಷ ಕಾನೂನಿಲ್ಲ: ಯೂಸುಫ್ ಪಠಾಣ್‌ಗೆ ಚಾಟಿ ಬೀಸಿದ ಗುಜರಾತ್ ಕೋರ್ಟ್