ದುಬೈ: ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯನ್ನು ಒಂದು ವೇಳೆ ಗೆದ್ದರೆ ಈ ವ್ಯಕ್ತಿ ಟ್ರೋಫಿ ಕೊಡುವುದಾದರೆ ಸ್ವೀಕರಿಸೋದೇ ಇಲ್ಲ ಎಂದು ಟೀಂ ಇಂಡಿಯಾ ತೀರ್ಮಾನಿಸಿದೆಯಂತೆ.
ಏಷ್ಯಾ ಕಪ್ ಆಯೋಜಿಸುವುದು ಏಷ್ಯನ್ ಕ್ರಿಕೆಟ್ ಸಮಿತಿ. ಏಷ್ಯಾ ಕ್ರಿಕೆಟ್ ಸಮಿತಿಗೆ ಈಗ ಪಾಕಿಸ್ತಾನದ ಮೊಹ್ಸಿನ್ ನಖ್ವಿ ಅಧ್ಯಕ್ಷ. ಈಗಾಗಲೇ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಟೀಂ ಇಂಡಿಯಾ ಆಟಗಾರರು ಕೈ ಕುಲುಕುವುದಕ್ಕೇ ಹಿಂಜರಿದಿದ್ದರು.
ಇದೀಗ ಟೀಂ ಇಂಡಿಯಾ ಫೈನಲ್ ಗೆದ್ದರೆ ಸಂಪ್ರದಾಯದ ಪ್ರಕಾರ ಎಸಿಸಿ ಅಧ್ಯಕ್ಷರ ಬಳಿಯೇ ಪ್ರಶಸ್ತಿ ಸ್ವೀಕರಿಸಬೇಕು. ಅಂದರೆ ಮೊಹ್ಸಿನ್ ನಖ್ವಿಯೇ ಪ್ರಶಸ್ತಿ ನೀಡಬೇಕು. ಆದರೆ ಅವರ ಕೈಯಿಂದ ಪ್ರಶಸ್ತಿ ಸ್ವೀಕರಿಸದೇ ಇರಲು ಟೀಂ ಇಂಡಿಯಾ ನಿರ್ಧರಿಸಿದೆ.
ಹೀಗಾಗಿ ಟೀಂ ಇಂಡಿಯಾ ಫೈನಲ್ ಗೆದ್ದರೆ ಮತ್ತೊಂದು ಡ್ರಾಮಾ ನಡೆಯುವುದು ಖಚಿತವಾಗಿದೆ. ಅಥವಾ ಸ್ವತಃ ಮೊಹ್ಸಿನ್ ಅವರೇ ಮುಜುಗರ ತಪ್ಪಿಸಲು ಟ್ರೋಫಿ ಪ್ರಧಾನ ಮಾಡುವುದರಿಂದ ಹಿಂದೆ ಸರಿಯುತ್ತಾರಾ ನೋಡಬೇಕಿದೆ.