ದುಬೈ: ಯುಎಇ ವಿರುದ್ಧ ಪಂದ್ಯ ನಡೆಯುವ ಮೊದಲು ಹೈಡ್ರಾಮಾ ನಡೆಸಿದ ಪಾಕಿಸ್ತಾನ ಕೊನೆಗೂ ಐಸಿಸಿ ಜೊತೆ ಮಾತುಕತೆ ನಡೆಸಿ 1 ಗಂಟೆ ವಿಳಂಬವಾಗಿ ಪಂದ್ಯಕ್ಕೆ ಆಗಮಿಸಿತು. ಆದರೆ ಇದರ ಬೆನ್ನಲ್ಲೇ ಪಾಕ್ ಪ್ರೇಮಿಗಳು ಸೋಷಿಯಲ್ ಮೀಡಿಯಾದಲ್ಲಿ ನೋಡಿ ನಾವು ಭಾರತವನ್ನು ನಮ್ಮ ಮುಂದೆ ಮಂಡಿಯೂರಿಸಿದೆವು ಎಂದು ಬೀಗುತ್ತಿದ್ದಾರೆ. ಆದರೆ ಅಸಲಿ ಕತೆಯೇ ಬೇರೆ.
ಯುಎಇ ವಿರುದ್ಧ ಆಡಬೇಕೆಂದರೆ ಮ್ಯಾಚ್ ರೆಫರಿ ಆಂಡಿ ಪೈಕ್ರಾಫ್ಟ್ ರನ್ನು ಕಿತ್ತು ಹಾಕಬೇಕು ಎಂದು ಪಾಕಿಸ್ತಾನ ಎರಡು ಬಾರಿ ಐಸಿಸಿಗೆ ಈ ಮೇಲ್ ಮಾಡಿ ಒತ್ತಡ ಹಾಕಿತ್ತು. ಆದರೆ ಅದನ್ನು ಐಸಿಸಿ ತಿರಸ್ಕರಿಸಿತು. ಹೀಗಾಗಿ ನಿನ್ನೆಯ ಯುಎಇ ವಿರುದ್ಧದ ಪಂದ್ಯಕ್ಕೆ ಸಮಯಕ್ಕೆ ಸರಿಯಾಗಿ ಬಾರದೇ ತನ್ನ ಪ್ರತಿಭಟನೆ ಹೊರ ಹಾಕಿತು.
ಕೊನೆಗೆ ಪಾಕಿಸ್ತಾನದ ಮಾಜಿ ಕ್ರಿಕೆಟಿಗರು ಮತ್ತು ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ ನಡುವೆ ತುರ್ತು ಸಭೆ ನಡೆದು ಬಳಿಕ ಪಾಕ್ ಆಟಗಾರರು ಮೈದಾನಕ್ಕೆ ಬಂದರು ಎನ್ನಲಾಗಿದೆ. ಇದರ ಬೆನ್ನಲ್ಲೇ ಕೆಲವು ಪಾಕಿಸ್ತಾನ ಕ್ರಿಕೆಟ್ ಪ್ರೇಮಿಗಳು ನೋಡಿ ನಮ್ಮ ಮೊಹ್ಸಿನ್ ನಖ್ವಿ ಭಾರತ ಮತ್ತು ಐಸಿಸಿಯನ್ನು ಏಕಕಾಲಕ್ಕೆ ನಮ್ಮ ಮುಂದೆ ಮಂಡಿಯೂರಿ ಕೂರುವಂತೆ ಮಾಡಿದರು ಎಂದು ಬೀಗಿದ್ದಾರೆ.
ಆದರೆ ಅಸಲಿಗೆ ಅಲ್ಲಿ ನಡೆದಿದ್ದೇ ಬೇರೆ. ಪಾಕಿಸ್ತಾನದ ಬೇಡಿಕೆಯಂತೆ ಮ್ಯಾಚ್ ರೆಫರಿಯನ್ನು ಐಸಿಸಿ ಕಿತ್ತು ಹಾಕಲೂ ಇಲ್ಲ, ಕೂಟವನ್ನೂ ಬಹಿಷ್ಕರಿಸಲಿಲ್ಲ. ಐಸಿಸಿ ಹೇಳಿದಂತೆ ಕೇಳದೇ ಪಾಕಿಸ್ತಾನಕ್ಕೆ ಬೇರೆ ದಾರಿಯೇ ಇರಲಿಲ್ಲ. ಒಂದು ವೇಳೆ ಕೂಟ ಬಹಿಷ್ಕರಿಸಿದ್ದರೆ ನೂರಾರು ಕೋಟಿ ರೂ ನಷ್ಟ ಭರ್ತಿ ಮಾಡಬೇಕಾಗಿತ್ತು. ಅಷ್ಟಕ್ಕೆ ತಕ್ಕ ಬಿಕಾರಿ ಪಾಕಿಸ್ತಾನದ ಬಳಿ ಹಣವಿಲ್ಲ. ಈ ಕಾರಣಕ್ಕೆ ಕೊನೆಯ ಕ್ಷಣದಲ್ಲಿ ಪ್ಯಾಚಪ್ ಮಾಡಿಕೊಂಡು ಮೈದಾನಕ್ಕೆ ಬಂದಿತ್ತು. ಹಾಗಿದ್ದರೂ ಪಾಕಿಸ್ತಾನಿಯರು ಜಟ್ಟಿ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎಂದು ಕೊಚ್ಚಿ ಕೊಳ್ಳುತ್ತಿದ್ದರು.