ದುಬೈ: ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯ ನಿನ್ನೆಯ ಪಂದ್ಯದಲ್ಲಿ ಮತ್ತೊಮ್ಮೆ ಟೀಂ ಇಂಡಿಯಾ ಎದುರಾಳಿ ಪಾಕಿಸ್ತಾನ ಆಟಗಾರರಿಗೆ ನೋ ಹ್ಯಾಂಡ್ ಶೇಕ್ ಎಂದಿದೆ.
ಮೊದಲ ಪಂದ್ಯದಲ್ಲಿ ಕೈ ಕುಲುಕದೇ ಪೆವಿಲಿಯನ್ ಗೆ ಮರಳಿದ್ದು ದೊಡ್ಡ ವಿವಾದವಾಗಿತ್ತು. ಪಾಕಿಸ್ತಾನ ಇದನ್ನೇ ಇಟ್ಟುಕೊಂಡು ಹೈಡ್ರಾಮಾವೇ ನಡೆಸಿತ್ತು. ಆದರೆ ಪಾಕಿಸ್ತಾನಕ್ಕೆ ಐಸಿಸಿಯಾಗಲೀ, ಬಿಸಿಸಿಐಯಾಗಲೀ ಕ್ಯಾರೇ ಎನ್ನಲಿಲ್ಲ.
ಯಾಕೆಂದರೆ ಶೇಕ್ ಹ್ಯಾಂಡ್ ಎನ್ನುವುದು ನಿಯಮವಲ್ಲ. ಹೀಗಾಗಿ ಐಸಿಸಿಯೂ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಇದೀಗ ಸೂಪರ್ ಫೋರ್ ಪಂದ್ಯದಲ್ಲೂ ಭಾರತೀಯ ನಾಯಕನಾಗಲೀ ಇತರೆ ಆಟಗಾರರಾಗಲೀ ಕೈ ಕುಲುಕುವ ಗೋಜಿಗೇ ಹೋಗಿಲ್ಲ.
ಆದರೆ ಈ ಬಾರಿ ಪಾಕಿಸ್ತಾನ ಆಟಗಾರರಿಗೂ ಅದರ ನಿರೀಕ್ಷೆಯಿತ್ತು. ಹೀಗಾಗಿ ಭಾರತೀಯ ಆಟಗಾರರ ಈ ವರ್ತನೆಗೆ ಅವರೂ ತಯಾರಾಗಿಯೇ ಇದ್ದರು. ಹೀಗಾಗಿ ಇಂದು ಪಾಕಿಸ್ತಾನವನ್ನೂ ಇದನ್ನು ಸ್ವೀಕರಿಸಿದಂತೆ ತೋರುತ್ತಿದೆ.