ದುಬೈ: ಏಷ್ಯಾ ಕಪ್ ಕ್ರಿಕೆಟ್ 2025 ರಲ್ಲಿ ನಿನ್ನೆ ಸೂಪರ್ ಫೋರ್ ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ್ ಪಂದ್ಯದಲ್ಲಿ ಥರ್ಡ್ ಅಂಪಾಯರ್ ನೀಡಿದ ವಿವಾದಾತ್ಮಕ ತೀರ್ಪಿನ ಬಗ್ಗೆ ಪಾಕಿಸ್ತಾನದ ಅಭಿಮಾನಿಗಳು ಆಕ್ರೋಶ ಹೊರಹಾಕಿದ್ದಾರೆ. ಮಾಡೋದೆಲ್ಲಾ ಮಾಡಿ ಟೀಂ ಇಂಡಿಯಾವನ್ನೇ ಚೀಟರ್ ಎಂದಿದ್ದಾರೆ.
ಟೀಂ ಇಂಡಿಯಾ ಚೀಟರ್ ಎಂದು ಪಾಕ್ ಫ್ಯಾನ್ಸ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಫಕರ್ ಜಮಾನ್ ನೀಡಿದ ಕ್ಯಾಚ್ ನ್ನು ಟೀಂ ಇಂಡಿಯಾ ವಿಕೆಟ್ ಕೀಪರ್ ಸಂಜು ಸ್ಯಾಮ್ಸನ್ ಹಿಡಿದಿದ್ದರು. ಆದರೆ ಈ ಕ್ಯಾಚ್ ಕ್ಲೀನ್ ಆಗಿರಲಿಲ್ಲ. ನೆಲಕ್ಕೆ ತಾಕಿದೆ ಎನ್ನುವುದು ಪಾಕ್ ಅಭಿಮಾನಿಗಳ ವಾದವಾಗಿದೆ.
ಆದರೆ ಥರ್ಡ್ ಅಂಪಾಯರ್ ಪರಾಮರ್ಶಿಸಿ ಫಕರ್ ಜಮಾನ್ ಗೆ ಔಟ್ ತೀರ್ಪು ನೀಡಿದ್ದರು. ಹೀಗಾಗಿ ಥರ್ಡ್ ಅಂಪಾಯರ್ ಕೂಡಾ ಭಾರತದ ಪರ ಕೆಲಸ ಮಾಡಿದ್ದಾರೆ. ಈ ಪಂದ್ಯದಲ್ಲಿ ಭಾರತದ ಪರ 14 ಮಂದಿ ಬ್ಯಾಟರ್ ಆಡುತ್ತಿದ್ದಾರೆ ಎಂದು ಪಾಕ್ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆಟದಲ್ಲಿ ಏನೂ ಕಿಸಿಯಲು ಸಾಧ್ಯವಾಗದ ಪಾಕಿಸ್ತಾನ ಥರ್ಡ್ ಅಂಪಾಯರ್ ಗಳ ಮೇಲೆ ಗೂಬೆ ಕೂರಿಸಿದೆ. ಥರ್ಡ್ ಅಂಪಾಯರ್ ಗಳು ಭಾರತದ ಪರ ಇದ್ದ ಕಾರಣಕ್ಕೇ ಅವರು ಪಂದ್ಯ ಗೆದ್ದಿದ್ದಾರೆ ಎಂದು ಹೇಳಿಕೊಳ್ಳುತ್ತಿದೆ.