Publish Date: Thu, 12 Aug 2021 (10:12 IST)
Updated Date: Thu, 12 Aug 2021 (10:14 IST)
ಬೆಂಗಳೂರು: ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋನ 8 ನೇ ಆವೃತ್ತಿಯ ವಿನ್ನರ್ ಮಂಜು ಪಾವಗಡ ತಮ್ಮ ಕನಸು ನನಸು ಮಾಡಿಕೊಂಡಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ಫೈನಲ್ ವಾರ ಮಂಜು ನನಗೆ ಶಿವರಾಜ್ ಕುಮಾರ್ ಅವರ ಮಾತುಗಳನ್ನು ಕೇಳಬೇಕೆಂದು ಕೋರಿಕೆಯಿಟ್ಟಿದ್ದರು. ಅದರಂತೆ ಬಿಗ್ ಬಾಸ್ ಶಿವಣ್ಣರಿಂದ ನೇರವಾಗಿ ಮಂಜುಗೆ ಶುಭ ಹಾರೈಕೆಯ ಸಂದೇಶ ನೀಡಿದ್ದರು.
ಇದೀಗ ಬಿಗ್ ಬಾಸ್ ಮನೆಯಿಂದ ಹೊರಬಂದ ಬಳಿಕ ಮಂಜು ತಾವು ಗೆದ್ದ ಟ್ರೋಫಿ ಸಮೇತ ಶಿವರಾಜ್ ಕುಮಾರ್ ಮನೆಗೆ ತೆರಳಿ ಭೇಟಿ ಮಾಡಿದ್ದಲ್ಲದೆ, ಅವರ ಆಶೀರ್ವಾದ ಪಡೆದುಕೊಂಡಿದ್ದಾರೆ. ಮಂಜು ಶಿವಣ್ಣನವರ ದೊಡ್ಡ ಅಭಿಮಾನಿ. ಈ ಕಾರಣಕ್ಕೆ ತಮ್ಮ ಮೆಚ್ಚಿನ ನಟನ ಭೇಟಿಯಾಗಿ ಸಂತಸ ಹಂಚಿಕೊಂಡಿದ್ದಾರೆ.