Select Your Language

Notifications

webdunia
webdunia
webdunia
webdunia

ಕೆಜಿಎಪ್ 2 ಗೂ ಮೊದಲೇ ತೆಲುಗಿನಲ್ಲಿ ಬಿಡುಗಡೆಯಾಗಲಿದೆ ಯಶ್ ಸಿನಿಮಾ!

ಕೆಜಿಎಪ್ 2 ಗೂ ಮೊದಲೇ ತೆಲುಗಿನಲ್ಲಿ ಬಿಡುಗಡೆಯಾಗಲಿದೆ ಯಶ್ ಸಿನಿಮಾ!
ಬೆಂಗಳೂರು , ಗುರುವಾರ, 12 ಆಗಸ್ಟ್ 2021 (09:50 IST)
ಬೆಂಗಳೂರು: ಕೆಜಿಎಫ್ ಸಿನಿಮಾ ಬಳಿಕ ತೆಲುಗಿನಲ್ಲೂ ರಾಕಿಂಗ್ ಸ್ಟಾರ್ ಯಶ್ ಗೆ ಸಾಕ‍ಷ್ಟು ಅಭಿಮಾನಿಗಳಿದ್ದಾರೆ. ಅಲ್ಲಿನ ಅಭಿಮಾನಿಗಳೂ ಕೆಜಿಎಫ್ 2 ಬಿಡುಗಡೆಗೆ ಕಾಯುತ್ತಲೇ ಇದ್ದಾರೆ.


ಆದರೆ ಕೆಜಿಎಫ್ 2 ಬಿಡುಗಡೆಗೂ ಮೊದಲೇ ಯಶ್ ರ ಮತ್ತೊಂದು ಸಿನಿಮಾ ತೆಲುಗಿನಲ್ಲಿ ಬಿಡುಗಡೆಯಾಗಲಿದೆ. ಆದರೆ ಇದು ಹೊಸ ಸಿನಿಮಾ ಅಲ್ಲ. ಕನ್ನಡದಲ್ಲಿ ಬಿಡುಗಡೆಯಾಗಿದ್ದ ಲಕ್ಕಿ ಸಿನಿಮಾ ತೆಲುಗಿಗೆ ಡಬ್ ಆಗುತ್ತಿದ್ದು, ಈ ಸಿನಿಮಾ ಅಲ್ಲಿ ರಿಲೀಸ್ ಆಗಲಿದೆ.

ಕೊರೋನಾ ಇಲ್ಲದೇ ಹೋಗಿದ್ದರೆ ಅಕ್ಟೋಬರ್ ನಲ್ಲಿ ಕೆಜಿಎಫ್ 2 ಬಿಡುಗಡೆಯಾಗಬೇಕಿತ್ತು. ಆದರೆ ಅದೀಗ ಇನ್ನೂ ಮುಂದೂಡಿಕೆಯಾಗಿದ್ದು, ಯಾವಾಗ ಎನ್ನುವುದು ಇನ್ನೂ ನಿರ್ಧಾರವಾಗಿಲ್ಲ.

Share this Story:

Follow Webdunia kannada

ಮುಂದಿನ ಸುದ್ದಿ

ಸರ್ಜರಿ ಬಳಿಕ ಹೆಲ್ತ್ ಅಪ್ ಡೇಟ್ ಕೊಟ್ಟ ಪ್ರಕಾಶ್ ರಾಜ್