ಹೈದರಾಬಾದ್: ಬಹುಭಾಷಾ ನಟಿ ನಯನತಾರಾ ತಮ್ಮ ಬಹುದಿನಗಳ ಒಡನಾಡಿ ನಿರ್ದೇಶಕ ವಿಘ್ನೇಶ್ ಶಿವನ್ ಜೊತೆ ಎಂಗೇಜ್ ಮೆಂಟ್ ಮಾಡಿಕೊಂಡಿದ್ದಾರೆ.
ಇದಕ್ಕೆ ಪುರಾವೆಯೆಂಬಂತೆ ನಯನತಾರಾ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಉಂಗುರ ತೊಟ್ಟಿರುವ ಫೋಟೋ ಪ್ರಕಟಿಸಿದ್ದಾರೆ. ಇದರಿಂದಾಗಿ ಅವರು ಎಂಗೇಜ್ ಆಗಿರುವುದು ಪಕ್ಕಾ ಆಗಿದೆ.
ಕೆಲವು ವರ್ಷಗಳಿಂದ ಇಬ್ಬರೂ ಲಿವಿಂಗ್ ಇನ್ ರಿಲೇಷನ್ ಶಿಪ್ ನಲ್ಲಿದ್ದಾರೆ. ಇದೀಗ ಎಂಗೇಜ್ ಮೆಂಟ್ ಮಾಡಿಕೊಂಡಿರುವ ಜೋಡಿ, ಕೊರೋನಾ ಸಂಕಷ್ಟ ಕಳೆದ ಮೇಲೆ ವಿವಾಹವಾಗಬಹುದು ಎನ್ನಲಾಗಿದೆ.
ಸೂಕ್ತ ಸಂಗಾತಿ ಬೇಕಾ? ಕನ್ನಡ ಮ್ಯಾಟ್ರಿಮೊನಿಯಲ್ಲಿ - ನೋಂದಣಿ ಉಚಿತ!