Select Your Language

Notifications

webdunia
webdunia
webdunia
webdunia

ಚಿತ್ರೀಕರಣಕ್ಕೆ ಇನ್ನು ಕಠಿಣ ನಿಯಮ: ಸಿಎಂ ಬೊಮ್ಮಾಯಿ ನಿರ್ಧಾರ

webdunia
ಬೆಂಗಳೂರು , ಮಂಗಳವಾರ, 10 ಆಗಸ್ಟ್ 2021 (11:14 IST)
ಬೆಂಗಳೂರು: ಲವ್ ಯೂ ರಚ್ಚು ಸಿನಿಮಾ ಶೂಟಿಂಗ್ ವೇಳೆ ಫೈಟರ್ ವಿವೇಕ್ ದುರಂತ ಸಾವನ್ನಪ್ಪಿರುವ ಬಗ್ಗೆ ಪ್ರತಿಕ್ರಿಯಿಸಿರುವ ಸಿಎಂ ಬಸವರಾಜ ಬೊಮ್ಮಾಯಿ ಚಿತ್ರೀಕರಣಕ್ಕೆ ಖಡಕ್ ನಿಯಮಗಳನ್ನು ಜಾರಿಗೆ ತರಲು ಚಿಂತನೆ ನಡೆಸಿರುವುದಾಗಿ ಹೇಳಿದ್ದಾರೆ.


 

ಚಿತ್ರೀಕರಣದಲ್ಲಿ ಇತ್ತೀಚೆಗೆ ಹಲವು ದುರಂತ ಪ್ರಕರಣಗಳು ನಡೆದಿರುವ ಉದಾಹರಣೆಗಳು ನಮ್ಮ ಮುಂದಿವೆ. ಹೀಗಾಗಿ ಇನ್ನು ಮುಂದೆ ಚಿತ್ರೀಕರಣ ನಡೆಸಲು ಕೆಲವು ಹೊಸ ನಿಯಮಗಳನ್ನು ಜಾರಿಗೆ ತರಲಿದ್ದೇವೆ. ಇದರ ಬಗ್ಗೆ ಸದ್ಯದಲ್ಲೇ ಆದೇಶ ನೀಡಲಿದ್ದೇವೆ ಎಂದು ಬೊಮ್ಮಾಯಿ ಹೇಳಿದ್ದಾರೆ.

ಚಿತ್ರೀಕರಣ ನಡೆಸಲು ಕೆಲವೊಂದು ನಿಯಮಗಳನ್ನು ಪಾಲಿಸಲೇಬೇಕು. ಆದರೆ ಇತ್ತೀಚೆಗೆ ಅವುಗಳು ಪಾಲನೆಯಾಗುತ್ತಿಲ್ಲ. ಇದರ ಬಗ್ಗೆ ಕಠಿಣ ನಿಯಮ ಹೊರತರುವುದಾಗಿ ಮುಖ್ಯಮಂತ್ರಿಗಳು ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಹಿರಿಯ ನಟಿ ಲೀಲಾವತಿ ಮನೆಗೆ ದಿಢೀರ್ ಭೇಟಿ ಕೊಟ್ಟ ನಟಿ ಸುಧಾರಾಣಿ, ಶ್ರುತಿ, ಮಾಳವಿಕಾ