ಬೆಂಗಳೂರು: ಲವ್ ಯೂ ರಚ್ಚು ಸಿನಿಮಾ ಶೂಟಿಂಗ್ ವೇಳೆ ಫೈಟರ್ ವಿವೇಕ್ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಘಟನಾ ಸ್ಥಳದಲ್ಲಿದ್ದ ಸಹಾಯಕ ರಂಜಿತ್ ಹೇಳಿಕೆ ನೀಡಿದ್ದಾರೆ.
ಘಟನೆ ನಡೆದ ಸ್ಥಳದಿಂದ ನಾನು 200 ಮೀ. ದೂರದಲ್ಲಿದ್ದೆ. ಸ್ವಲ್ಪ ಸಮಯದ ನಂತರ ನನಗೆ ವಿವರ ತಿಳಿಯಿತು ಎಂದಿದ್ದರು. ಆದರೆ ಈ ಬಗ್ಗೆ ಹೇಳಿಕೆ ನೀಡಿರುವ ಗಾಯಾಳು ರಂಜಿತ್ ಅಜೇಯ್ ರಾವ್ ಅಲ್ಲೇ ಇದ್ದರು ಎಂದಿದ್ದಾರೆ.
ಇದು ಕ್ರೇನ್ ಅಪರೇಟರ್ ಅಜಾಗರೂಕತೆಯಿಂದ ಆದ ದುರ್ಘಟನೆ. ಮಾಸ್ಟರ್ ದು ತಪ್ಪಿಲ್ಲ. ಒಮ್ಮೆ ಮರಕ್ಕೆ ಟಚ್ ಆದಾಗಲೇ ನಾವು ಎಚ್ಚರಿಸಿದ್ದೆವು. ಎರಡನೇ ಬಾರಿ ಮರಕ್ಕೆ ಕ್ರೇನ್ ಟಚ್ ಆದಾಗ ಈ ದುರ್ಘಟನೆ ಸಂಭವಿಸಿದೆ. ಘಟನೆ ನಡೆದಾಗ ಅಜೇಯ್ ರಾವ್ ಪಕ್ಕದಲ್ಲೇ ಕುರ್ಚಿ ಹಾಕಿಕೊಂಡು ಕೂತಿದ್ದರು. ಆದರೆ ಅವರು ಯಾರೂ ನಮ್ಮ ಬಳಿ ಬರಲೇ ಇಲ್ಲ ಎಂದು ರಂಜಿತ್ ಹೇಳಿದ್ದಾರೆ.