Publish Date: Mon, 09 Aug 2021 (17:35 IST)
Updated Date: Mon, 09 Aug 2021 (17:37 IST)
ಬೆಂಗಳೂರು: ಲವ್ ಯೂ ರಚ್ಚು ಸಿನಿಮಾ ಶೂಟಿಂಗ್ ವೇಳೆ ಸ್ಟಂಟ್ ಮಾಸ್ಟರ್ ವಿವೇಕ್ ದುರಂತ ಸಾವಿನ ಮೊದಲು ನಡೆದ ದೃಶ್ಯಗಳ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ರಾಮನಗರದ ಜೋಗನದೊಡ್ಡಿ ಬಳಿ ಶೂಟಿಂಗ್ ನಡೆಯುತ್ತಿದ್ದಾಗ ವಿದ್ಯುತ್ ತಂತಿ ಸ್ಪರ್ಶಿಸಿ ವಿವೇಕ್ ದುರಂತ ಸಾವಿಗೀಡಾಗಿದ್ದಾರೆ. ಈ ದುರಂತಕ್ಕೆ ಮೊದಲು ಅವರು ಚಿತ್ರದ ನಾಯಕ ಅಜೇಯ್ ರಾವ್ ಗೆ ಫೈಟಿಂಗ್ ದೃಶ್ಯದ ಸಂಯೋಜನೆ ಮಾಡುತ್ತಿದ್ದರು.
ಅವರ ಜೊತೆಗೆ ನಾಯಕಿ ನಟಿ ರಚಿತಾ ರಾಮ್ ಕೂಡಾ ಇದ್ದರು. ಅದ್ಭುತ ಸಾಹಸ ದೃಶ್ಯ ಸಂಯೋಜಿಸುತ್ತಾ, ಖುಷಿಯಿಂದ ಕುಣಿಯುತ್ತಿದ್ದ ವಿವೇಕ್ ಕೆಲವೇ ಕ್ಷಣಗಳಲ್ಲಿ ದುರಂತಕ್ಕೀಡಾಗುತ್ತಾರೆ ಎಂದರೆ ವಿಪರ್ಯಾಸ.