Select Your Language

Notifications

webdunia
webdunia
webdunia
webdunia

ಮತ್ತೆ ಮೋಡಿ ಮಾಡಲಿದ್ದಾರೆ ಅರ್ಜುನ್ ಜನ್ಯಾ-ಸೋನು ನಿಗಂ

ಮತ್ತೆ ಮೋಡಿ ಮಾಡಲಿದ್ದಾರೆ ಅರ್ಜುನ್ ಜನ್ಯಾ-ಸೋನು ನಿಗಂ
ಬೆಂಗಳೂರು , ಸೋಮವಾರ, 9 ಆಗಸ್ಟ್ 2021 (10:10 IST)
ಬೆಂಗಳೂರು: ಅರ್ಜುನ್ ಜನ್ಯಾ ಸಂಗೀತ ಸಂಯೋಜನೆಯಲ್ಲಿ ಸೋನು ನಿಗಂ ಹಲವು ಹಿಟ್ ಸಾಂಗ್ ಗಳನ್ನು ಈ ಮೊದಲು ಕೊಟ್ಟಿದ್ದಾರೆ. ಈಗ ಮತ್ತೆ ಆ ಜೋಡಿ ಒಂದಾಗುತ್ತಿದೆ.


ಜನ್ಯಾ ಇತ್ತೀಚೆಗೆ ಬೇರೆ ಬೇರೆ ಗಾಯಕರಿಂದ ತಮ್ಮ ಹಾಡುಗಳನ್ನು ಹಾಡಿಸಿದ್ದಾರೆ. ಇದೀಗ ಮತ್ತೆ ತಮ್ಮ ಮೆಚ್ಚಿನ ಸೋನು ನಿಗಂ ಜೊತೆಗೆ ರೆಕಾರ್ಡಿಂಗ್ ಮಾಡಿದ್ದಾರೆ.

ಜೋಗಿ ಪ್ರೇಮ್ ನಿರ್ದೇಶನದ ‘ಏಕ್ ಲವ್ ಯಾ’ ಸಿನಿಮಾದ ಹಾಡಿಗೆ ಜನ್ಯಾ ಸಂಗೀತ ಸಂಯೋಜನೆ ಮಾಡುತ್ತಿದ್ದು, ಇದೀಗ ಸೋನು ಒಂದು ಮೆಲೊಡಿ ಹಾಡಿಗೆ ಧ್ವನಿಯಾಗಿದ್ದಾರೆ ಎಂದು ತಿಳಿದುಬಂದಿದೆ. ಈ ಸಿನಿಮಾದಲ್ಲಿ ಬಿಡುಗಡೆಯಾದ ಎರಡೂ ಹಾಡುಗಳು ಈಗಾಗಲೇ ಸೂಪರ್ ಹಿಟ್ ಆಗಿದೆ. ಇತ್ತೀಚೆಗೆ ಗಾಯಕಿ ಮಂಗ್ಲಿ ಇದೇ ಸಿನಿಮಾಗೆ ಎಣ್ಣೆ ಹಾಡೊಂದನ್ನು ಹಾಡಿದ್ದರು. ಈಗ ಮತ್ತೊಂದು ಮೆಲೊಡಿ ಹಾಡಿನ ಧ್ವನಿಮುದ್ರಣವಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕನ್ನಡಕ್ಕೆ ಬಂದ ಆರ್ ಎಕ್ಸ್ 100 ಬೆಡಗಿ ಪಾಯಲ್