Publish Date: Thu, 06 May 2021 (09:14 IST)
Updated Date: Thu, 06 May 2021 (09:15 IST)
ಮುಂಬೈ: ಕೊರೋನಾ ವ್ಯಾಕ್ಸಿನ್ ಹಾಕಿಸಿದ ಮೇಲೆ ರಕ್ತದಾನ ಮಾಡುವಂತಿಲ್ಲ. ಹೀಗಾಗಿ ಅದಕ್ಕೂ ಮೊದಲೇ ರಕ್ತದಾನ ಮಾಡಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸಂದೇಶಗಳು ಬರುತ್ತಲೇ ಇರುತ್ತವೆ.
ಇದೀಗ ಖ್ಯಾತ ಗಾಯಕ ಸೋನು ನಿಗಂ ವ್ಯಾಕ್ಸಿನ್ ಹಾಕಿಸಿಕೊಳ್ಳುವ ಮೊದಲು ರಕ್ತದಾನ ಮಾಡಿ ಅಭಿಮಾನಿಗಳಿಗೆ ಸಂದೇಶ ನೀಡಿದ್ದಾರೆ.
ಮುಂಬೈನಲ್ಲಿ ರಕ್ತದಾನ ಮಾಡಿದ ಸೋನು ನಿಗಂ, ನೀವೂ ವ್ಯಾಕ್ಸಿನ್ ಹಾಕಿಸಿಕೊಳ್ಳುವ ಮೊದಲು ರಕ್ತದಾನ ಮಾಡಿ. ಇದರಿಂದ ಎಷ್ಟೋ ಜನರಿಗೆ ಸಹಾಯವಾಗುತ್ತದೆ ಎಂದು ಮನವಿ ಮಾಡಿದ್ದಾರೆ.