ಹೈದರಾಬಾದ್ : ಟಾಲಿವುಡ್ ನಟ ರೆಬಲ್ ಸ್ಟಾರ್ ಪ್ರಭಾಸ್ ಅವರು ಸಿದ್ದಾರ್ಥ ಆನಂದ್ ಅವರೊಂದಿಗೆ ಚಿತ್ರ ಮಾಡಲು ಹೊರಟಿದ್ದಾರೆ. ಸಿದ್ದಾರ್ಥ ಅವರ ಕಥೆಯನ್ನು ಕೂಡ ಪ್ರಭಾಸ್ ಇಷ್ಟಪಟ್ಟಿದ್ದಾರೆ.
ಇನ್ನು ಹೆಸರಿಡದ ಈ ಚಿತ್ರವು ಬಹು ಬಜೆಟ್ ನಲ್ಲಿ ಮೂಡಿಬರುವ ಆ್ಯಕ್ಷನ್ ಥ್ರಿಲ್ಲರ್ ಚಿತ್ರವಾಗಿದೆ. ಈ ಚಿತ್ರದಲ್ಲಿ ಪ್ರಭಾಸ್ ಅವರೊಂದಿಗೆ ನಟಿಸಲು ಸಿದ್ಧಾರ್ಥ ಆನಂದ್ ಅವರು ಬಾಲಿವುಡ್ ನಟಿ ಕತ್ರಿನಾ ಕೈಫ್ ಅವರನ್ನು ಚಿತ್ರತಂಡಕ್ಕೆ ಕರೆತರಲು ಯೋಜಿಸುತ್ತಿದ್ದಾರೆ ಎಂಬ ವದಂತಿಗಳು ಕೇಳಿಬಂದಿವೆ.
ಸಿದ್ದಾರ್ಥ ಅವರೊಂದಿಗೆ ಕತ್ರಿನಾ ಕೈಫ್ ಅವರು ಬ್ಯಾಂಗ್ ಬ್ಯಾಂಗ್ ನಲ್ಲಿ ಒಟ್ಟಿಗೆ ಕೆಲಸ ಮಾಡಿದ್ದು, ಹಾಗಾಗಿ ಇವರಿಬ್ಬರು ಉತ್ತಮ ಸಂಬಂಧ ಹೊಂದಿದ್ದಾರೆ ಎನ್ನಲಾಗಿದೆ.