ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಶೂಟಿಂಗ್ ವೇಳೆ ಅವಘಡದಿಂದಾಗಿ ಅನೇಕ ದುರಂತಗಳು ನಡೆದಿವೆ. ಈಗ ಅಂತಹದ್ದೇ ದುರಂತದಲ್ಲಿ ಯುವ, ಪ್ರತಿಭಾವಂತ ಸ್ಟಂಟ್ ಮಾಸ್ಟರ್ ಇನ್ನಿಲ್ಲವಾಗಿದ್ದಾರೆ.
ರಚಿತಾ ರಾಮ್, ಅಜೇಯ್ ರಾವ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ಲವ್ ಯೂ ರಚ್ಚು ಸಿನಿಮಾ ಶೂಟಿಂಗ್ ವೇಳೆ ವಿದ್ಯುತ್ ತಂತಿ ಸ್ಪರ್ಶಿಸಿ ಫೈಟರ್ ವಿವೇಕ್ (28) ದುರಂತ ಸಾವನ್ನಪ್ಪಿದ್ದಾರೆ.
ರಾಮನಗರ ಬಳಿ ಶೂಟಿಂಗ್ ವೇಳೆ ಈ ದುರ್ಘಟನೆ ನಡೆದಿದೆ. ತಮಿಳುನಾಡು ಮೂಲದವರಾದ ವಿವೇಕ್ ಯುವ, ಪ್ರತಿಭಾವಂತ ಫೈಟರ್ ಆಗಿದ್ದರು. ಅವರ ದುರಂತ ಸಾವಿನಿಂದಾಗಿ ಕುಟುಂಬಸ್ಥರು ಆಘಾತಕ್ಕೊಳಗಾಗಿದ್ದಾರೆ.