Publish Date: Tue, 10 Aug 2021 (09:04 IST)
Updated Date: Tue, 10 Aug 2021 (09:22 IST)
ಬೆಂಗಳೂರು: ನವರಸನಾಯಕ ಜಗ್ಗೇಶ‍್ ನಿರ್ ದೋಸೆ ಬಳಿಕ ವಿಜಯೇಂದ್ರ ಪ್ರಸಾದ್ ನಿರ್ದೇಶನದಲ್ಲಿ ತೋತಾಪುರಿ ಸಿನಿಮಾ ಮಾಡುತ್ತಿರುವುದು ಎಲ್ಲರಿಗೂ ಗೊತ್ತೇ ಇದೆ. ಈ ಸಿನಿಮಾ ಮೇಲೆ ಜಗ್ಗೇಶ್ ಗೆ ಭಾರೀ ನಿರೀಕ್ಷೆಯಿದೆ.
ಸದ್ಯಕ್ಕೆ ಚಿತ್ರೀಕರಣ, ಡಬ್ಬಿಂಗ್ ಮುಗಿಸಿರುವ ತೋತಾಪುರಿ ಒಂದು ಮತ್ತು ಎರಡನೇ ಭಾಗ ಜೊತೆಯಾಗಿ ತೆರೆಗೆ ಬರಲು ಸಜ್ಜಾಗಿದೆ. ಅದಕ್ಕೂ ಮೊದಲು ಪ್ರಚಾರಾರ್ಥವಾಗಿ ಚಿತ್ರತಂಡ ಟೀಸರ್ ಒಂದನ್ನು ಚಿತ್ರೀಕರಿಸಿದೆ.
ಇದರ ಬಗ್ಗೆ ಮಾಹಿತಿ ನೀಡಿರುವ ಜಗ್ಗೇಶ‍್ 'ತೋತಾಪುರಿ ವರ್ಣರಂಜಿ ಹಾಸ್ಯ,ಸಾಂಸಾರಿಕ, ಭಾವನಾತ್ಮಕ, ಮಾನವ ಏಕತೆ ಸಂದೇಶ ನೀಡುವ ಚಿತ್ರ. ಒಂದು ಕತೆಯಲ್ಲಿ ಅನೇಕ ರಸದೌತಣ. ಈ ಸಿನಿಮಾದಲ್ಲಿ ನಿಮಗೆ ಹಳೇ ಜಗ್ಗೇಶ ಸಿಗ್ತಾನೆ ಎಂಬುದು ನನ್ನ ಭರವಸೆ ಎಂದಿದ್ದಾರೆ.