Select Your Language

Notifications

webdunia
webdunia
webdunia
webdunia

ಶಿವಣ್ಣ ಸಿನಿಮಾ ಮೂಲಕ ಪುನೀತ್,ಸುದೀಪ್ ಒಂದೇ ಫ್ರೇಮ್ ನಲ್ಲಿ?!

ಶಿವಣ್ಣ ಸಿನಿಮಾ ಮೂಲಕ ಪುನೀತ್,ಸುದೀಪ್ ಒಂದೇ ಫ್ರೇಮ್ ನಲ್ಲಿ?!
ಬೆಂಗಳೂರು , ಗುರುವಾರ, 12 ಆಗಸ್ಟ್ 2021 (09:05 IST)
ಬೆಂಗಳೂರು: ಶಿವರಾಜ್ ಕುಮಾರ್ ಅಭಿನಯದ 124 ನೇ ಸಿನಿಮಾಗೆ ಆಗಸ್ಟ್ 17 ರಂದು ಮುಹೂರ್ತ ಕಾರ್ಯಕ್ರಮ ನೆರವೇರಲಿದೆ.


ಈ ಕಾರ್ಯಕ್ರಮ ಹಲವು ಅಚ್ಚರಿಯನ್ನೊಳಗೊಳ್ಳಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಶಿವಣ್ಣನ ಈ ಸಿನಿಮಾ ಮುಹೂರ್ತಕ್ಕೆ ಕಿಚ್ಚ ಸುದೀಪ್ ಮತ್ತು ಪುನೀತ್ ರಾಜ್ ಕುಮಾರ್ ಅತಿಥಿಗಳಾಗಿ ಆಗಮಿಸಲಿದ್ದಾರೆ ಎಂಬ ಸುದ್ದಿಯಿದೆ. ಆದರೆ ಚಿತ್ರತಂಡ ಈ ಬಗ್ಗೆ ಇನ್ನೂ ಗುಟ್ಟು ಬಿಟ್ಟುಕೊಟ್ಟಿಲ್ಲ. ಒಂದು ವೇಳೆ ನಿಜವಾದರೆ ಮತ್ತೆ ಸ್ಯಾಂಡಲ್ ವುಡ್ ದಿಗ್ಗಜರನ್ನು ಒಂದೇ ವೇದಿಕೆಯಲ್ಲಿ ನೋಡಬಹುದು.

ನಗರದ ಪಂಚತಾರಾ ಹೋಟೆಲ್ ನಲ್ಲಿ ಮುಹೂರ್ತ ಕಾರ್ಯಕ್ರಮ ನಡೆಯಲಿದೆ. ಈ ಬಹುನಿರೀಕ್ಷಿತ ಸಿನಿಮಾಗೆ ರಾಮ್ ದುಲಿಪುಡಿ ಆಕ್ಷನ್ ಕಟ್ ಹೇಳುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ವಿಮಾನದಲ್ಲಿ ಏಕಾಂಗಿ ಪಯಣ: ವಿನೂತನ ಅನುಭವ ಹಂಚಿಕೊಂಡ ನಟ ಮಾಧವನ್