ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲಿ ಸಾಕಷ್ಟು ಹಿಟ್ ಹಾಡುಗಳನ್ನು ಕೊಟ್ಟ ಖ್ಯಾತ ಗಾಯಕ ಹೇಮಂತ್ ನಿನ್ನೆ ಸರಳವಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
Photo Courtesy: Instagram
ಕೇವಲ ಕುಟುಂಬಸ್ಥರ ಸಮ್ಮುಖದಲ್ಲಿ ಸರಳವಾಗಿ ನಡೆದ ಸಮಾರಂಭದಲ್ಲಿ ಹೇಮಂತ್ ವೈದ್ಯೆ ಕೃತ್ತಿಕ ಅವರೊಂದಿಗೆ ಸಪ್ತಪದಿ ತುಳಿದಿದ್ದಾರೆ.
ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಹೇಳಿ ಮಾಡಿಸಿದ ಧ್ವನಿ ಹೇಮಂತ್ ರದ್ದು. ದರ್ಶನ್ ಗೆ ಹಾಡಿದ ಹೆಚ್ಚಿನ ಹಾಡುಗಳು ಸೂಪರ್ ಹಿಟ್ ಆಗಿವೆ. ಅದಲ್ಲದೆ, ಮುಂಗಾರು ಮಳೆ ಸಿನಿಮಾ ಸುವ್ವಿ ಸುವ್ವಾಲೆ ಹಾಡು ಎಂದೆಂದಿಗೂ ಜನಪ್ರಿಯ.