ಬೆಂಗಳೂರು: ಮೊನ್ನೆಯಷ್ಟೇ ಬಿಗ್ ಬಾಸ್ ಕನ್ನಡ 8 ನೇ ಆವೃತ್ತಿಗೆ ತೆರೆಬಿದ್ದಿತ್ತು. ಇದೀಗ ಮತ್ತೊಂದು ಹೊಸ ರೀತಿಯ ಬಿಗ್ ಬಾಸ್ ಆರಂಭವಾಗುತ್ತಿದೆ.
									
										
								
																	
ಇದು ಕೇವಲ 6 ದಿನದ ಬಿಗ್ ಬಾಸ್ ಶೋ. ಇಲ್ಲಿ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಧಾರವಾಹಿಗಳ ನಾಯಕ-ನಾಯಕಿಯರು ಜೋಡಿಯಾಗಿ ಪಾಲ್ಗೊಳ್ಳಲಿದ್ದಾರೆ.
									
			
			 
 			
 
 			
			                     
							
							
			        							
								
																	ಖ್ಯಾತ ನಿರೂಪಕ ಅಕುಲ್ ಬಾಲಾಜಿ ನಿರೂಪಕರಾಗಿರುವ ಈ ಶೋ ಒಂದು ರೀತಿಯಲ್ಲಿ ಗೇಮ್ ಶೋ ಎನ್ನಲಾಗಿದೆ. ಒಟ್ಟು 15 ಸೆಲೆಬ್ರಿಟಿಗಳು ಶೋನಲ್ಲಿರಲಿದ್ದಾರೆ. ಇದೇ ಶನಿವಾರ ಮತ್ತು ಭಾನುವಾರ ಈ ಶೋ ಗ್ರ್ಯಾಂಡ್ ಓಪನಿಂಗ್ ಇರಲಿದೆ.