Select Your Language

Notifications

webdunia
webdunia
webdunia
webdunia

ಕಿರುತೆರೆಗೆ ಎಂಟ್ರಿಕೊಡುತ್ತಿರುವ ಹರಿಪ್ರಿಯಾ, ಪ್ರಜ್ವಲ್ ದೇವರಾಜ್

ಕಿರುತೆರೆಗೆ ಎಂಟ್ರಿಕೊಡುತ್ತಿರುವ ಹರಿಪ್ರಿಯಾ, ಪ್ರಜ್ವಲ್ ದೇವರಾಜ್
ಬೆಂಗಳೂರು , ಬುಧವಾರ, 4 ಆಗಸ್ಟ್ 2021 (10:21 IST)
ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲಿ ಬ್ಯುಸಿಯಾಗಿರುವ ನಟಿ ಹರಿಪ್ರಿಯಾ, ನಟ ಪ್ರಜ್ವಲ್ ದೇವರಾಜ್ ಈಗ ಕಿರುತೆರೆಯ ಹಾದಿ ಹಿಡಿದಿದ್ದಾರೆ.


ಹಿರಿತೆರೆಯ ಕಲಾವಿದರು ಕಿರುತೆರೆಗೆ ಬರುವುದು ಅಪರೂಪವೇನಲ್ಲ. ಇತ್ತೀಚೆಗಿನ ದಿನಗಳಲ್ಲಿ ಇದು ಸಾಮಾನ್ಯವಾಗಿದೆ. ಇದೀಗ ಹರಿಪ್ರಿಯಾ ಮತ್ತು ಪ್ರಜ್ವಲ್ ಡ್ಯಾನ್ ಡ್ಯಾನ್ಸ್ ಎಂಬ ಡ್ಯಾನ್ಸ್ ರಿಯಾಲಿಟಿ ಶೋಗೆ ತೀರ್ಪುಗಾರರಾಗಿ ಬರಲಿದ್ದಾರೆ.

ಸ್ಟಾರ್ ಸುವರ್ಣದಲ್ಲಿ ಪ್ರಸಾರವಾಗಲಿರುವ ಈ ರಿಯಾಲಿಟಿ ಶೋಗೆ ಬಿಗ್ ಬಾಸ್ ವಿನ್ನರ್ ಶೈನ್ ಶೆಟ್ಟಿ ನಿರೂಪಕರಾಗಲಿದ್ದಾರೆ. ಹರಿಪ್ರಿಯಾ ಈ ಮೊದಲು ಧಾರವಾಹಿಗಳ ಪಾತ್ರ ಪರಿಚಯ ಮಾಡಲು ಕಿರುತೆರೆಯಲ್ಲಿ ಕಾಣಿಸಿಕೊಂಡಿದ್ದಿದೆ. ಆದರೆ ಪೂರ್ಣಪ್ರಮಾಣದಲ್ಲಿ ಶೋ ಒಂದಕ್ಕೆ ಬರುತ್ತಿರುವುದು ಇದೇ ಮೊದಲು.

Share this Story:

Follow Webdunia kannada

ಮುಂದಿನ ಸುದ್ದಿ

ಬಿಗ್ ಬಾಸ್ ಸ್ಪರ್ಧಿಗಳಿಗೆ ಮೆಚ್ಚಿನ ಅಡುಗೆ ಮಾಡಿದ ಕಿಚ್ಚ ಸುದೀಪ್