Select Your Language

Notifications

webdunia
webdunia
webdunia
webdunia

ಬಿಗ್ ಬಾಸ್ ಕನ್ನಡ 8: ಕೊನೆಯ ವಾರ ಡಬಲ್ ಎಲಿಮಿನೇಷನ್ ಶಾಕ್

ಬಿಗ್ ಬಾಸ್ ಕನ್ನಡ 8: ಕೊನೆಯ ವಾರ ಡಬಲ್ ಎಲಿಮಿನೇಷನ್ ಶಾಕ್
ಬೆಂಗಳೂರು , ಭಾನುವಾರ, 1 ಆಗಸ್ಟ್ 2021 (09:29 IST)
ಬೆಂಗಳೂರು: ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋ ಮುಕ್ತಾಯಗೊಳ್ಳಲು ಇನ್ನು ಒಂದು ವಾರ ಬಾಕಿಯಿದೆ. ಈ ನಡುವೆ ಇಂದು ಅಂತಿಮ ವಾರದ ಎಲಿಮಿನೇಷನ್ ಪ್ರಕ್ರಿಯೆ ನಡೆದಿದ್ದು ಈ ವಾರ ಮನೆಯಿಂದ ಇಬ್ಬರು ಸ್ಪರ್ಧಿಗಳು ಹೊರಬಂದಿದ್ದಾರೆ.


ಇಷ್ಟು ದಿನ ಮನೆಯಲ್ಲಿದ್ದು ಇನ್ನೇನು ಫಿನಾಲೆಗೆ ಒಂದು ವಾರವಿದೆ ಎನ್ನುವಷ್ಟರಲ್ಲಿ ಎಲಿಮಿನೇಟ್ ಆಗುವುದು ನಿಜಕ್ಕೂ ದುರದೃಷ್ಟಕರ. ಇಂತಹ ದುರದೃಷ್ಟ ಶಮಂತ್ ಗೌಡ ಮತ್ತು ಶುಭಾ ಪೂಂಜಾ ಅವರದ್ದಾಗಿದೆ. ಈ ವಾರ ಇಬ್ಬರೂ ಮನೆಯಿಂದ ಹೊರಬಿದ್ದಿದ್ದಾರೆ ಎಂಬ ಸುದ್ದಿ ಬಂದಿದೆ.

ಈ ವಾರ ಮನೆಯಿಂದ ಹೊರಹೋಗಲು ಅರವಿಂದ್, ಮಂಜು ಪಾವಗಡ, ಶಮಂತ್ ಗೌಡ, ಪ್ರಶಾಂತ್ ಸಂಬರಗಿ, ವೈಷ್ಠವಿ ಗೌಡ, ದಿವ್ಯಾ ಸುರೇಶ್, ಶುಭಾಪೂಂಜಾ ನಾಮಿನೇಟ್ ಆಗಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ಕಿಚ್ಚು ಹೆಚ್ಚಿಸಿದ ವಿಕ್ರಾಂತ್ ರೋಣನ ರಕ್ಕಮ್ಮ